ಬೆಂಗಳೂರು, ಡಿ.29- ರೆಸ್ಟೋರೆಂಟ್ ಮುಂಭಾಗ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದ ಕಳ್ಳರು ಲ್ಯಾಪ್ಟಾಪ್, ಮೊಬೈಲ್ ಹಾಗೂ ಕ್ಯಾಮೆರಾ ದೋಚಿರುವ ಘಟನೆ ಜೆ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾನಗರದ 100 ಅಡಿ ರಸ್ತೆಯ ರೆಸ್ಟೋರೆಂಟ್ವೊಂದರ ಮುಂಭಾಗ ಶೃತಿ ಸಾಗ್ವಿ ಎಂಬುವರು ರಾತ್ರಿ 8.30ರಲ್ಲಿ ಕಾರು ಪಾರ್ಕಿಂಗ್ ಮಾಡಿ ತೆರಳಿದ್ದರು.
ಈ ವೇಳೆ ಕಳ್ಳರು ಕಾರಿನ ಗಾಜು ಒಡೆದು ಕಳ್ಳತನ ನಡೆಸಿದ್ದಾರೆ.ಕೆಲ ಸಮಯದ ಬಳಿಕ ಶೃತಿ ಸಾಗ್ವಿ ಅವರು ಕಾರಿನ ಬಳಿ ಬಂದಾಗಲೇ ಕಳ್ಳತನ ನಡೆದಿರುವುದು ಕಂಡು ಬಂದಿದೆ.
ಈ ಬಗ್ಗೆ ಜೆ.ಬಿ.ನಗರ ಠಾಣೆಗೆ ದೂರು ನೀಡಿದ್ದಾರೆ.