ಬೆಂಗಳೂರು,ಡಿ.29:ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಒದಗಿಸುವ ದೃಷ್ಟಿಯಿಂದ ಸಂಸ್ಥೆಯಲ್ಲಿ ಈಗಗಲೇ ಆಚರಣೆಯಲ್ಲಿರುವ ಬಿಗ್-10 ಮಾರ್ಗಗಳನ್ನು 31ರ ರಾತ್ರಿ 11.30ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ.
ಜಿ-1, 2, 6, 7, 8, 9, 10, 11 ಹಾಗೂ ಜಿ-12 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಕಾಡುಗೋಡಿ, ಸರ್ಜಾಪುರ, ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾಟ್ರರ್ಸ್, ಜನಪ್ರಿಯ ಟೌನಶಿಪ್, ನೆಲಮಂಗಲ, ಯಲಹಂಕ ಉಪನಗರ, ಆರ್.ಕೆ.ಹೆಗ್ಗಡೆ ನಗರ, ಬಾಗಲೂರು ಹಾಗೂ ಹೊಸಕೋಟೆವರೆಗೆ ಚಲಿಸಲಿವೆ.
ಜಿ-3 ಹಾಗೂ ಜಿ-4 ಬ್ರಿರ್ಗಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‍ವರಗೆ ಸಂಚರಿಸಲಿವೆ.
ಮಂತ್ರಿಮಾಲ್ ಮೆಟ್ರೋ ರೈಲು ನಿಲ್ದಾಣದಿಂದ ಮೆಜೆಸ್ಟಿಕ್‍ಗೆ ಮತ್ತು ಎಂ.ಜಿ.ರಸ್ತೆ ಬಸ್ ನಿಲ್ದಾಣ, ಶಿವಾಜಿನಗರದವರೆಗೆ ಹಾಗೂ ಮೆಜೆಸ್ಟಿಕ್‍ನಿಂದ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಕ್ರಮ ಕೈಗೊಳ್ಳವಂತೆ ಆಯಾ ನಿಲ್ದಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರ ಜತೆಗೆ ಸಾರ್ವಜನಿಕರ ಸುರಕ್ಷತೆಗಾಗಿ ಸಂಸ್ಥೆಯ ಮೂರು ಸಾರಥಿ ವಾಹನಗಳು ಸಿಬ್ಬಂದಿಗಳೊಂದಿಗೆ ತಡರಾತ್ರಿವರೆಗೂ ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.