ಮರಳು ನೀತಿ ಬಗ್ಗೆ ಕಾಯ್ದೆ ಜಾರಿಗೆ ತರುವಂತೆ ಬಿಜೆಪಿಯವರೇ ಹೇಳಿದ್ದರು

ಬೆಂಗಳೂರು, ಡಿ.29- ಮರಳು ನೀತಿ ಬಗ್ಗೆ ಕಾಯ್ದೆ ಜಾರಿಗೆ ತನ್ನಿ ಎಂದು ಸ್ವತಃ ಬಿಜೆಪಿಯವರೇ ಹೇಳಿದ್ದರು, ಈಗ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದಕ್ಕೆ ವಿರೋಧ ಎದುರಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮರಳು ನೀತಿಯನ್ನು ಜಾರಿಗೆ ತರುವಂತೆ ಬಿಜೆಪಿಯವರೇ ಒತ್ತಾಯಿಸಿದ್ದರು.ಈಗ ಮರಳು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಈಗ ಅವರಿಂದಲೇ ಆಕ್ಷೇಪ ಬರುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಫಲನಾಗಿದ್ದೇನೆ. ಹಾಗಾಗಿಯೇ ಇಂತಹ ಆರೋಪ ಎದುರಾಗಿದೆ ಎಂದು ತಿಳಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಕುರಿತಂತೆ ಯಾವ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳುವುದೋ ಅದಕ್ಕೆ ನಾವು ಬದ್ಧ.ವರಿಷ್ಠರ ಯಾವುದೇ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ