ಬುಮ್ರಾ ಕರಾರುವಕ್ ದಾಳಿಗೆ ಆಸ್ಟ್ರೇಲಿಯಾ 151ರನ್‍ಗಳಿಗೆ ಆಲೌಟ್

ಮೆಲ್ಬೋರ್ನ್: ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬುಮ್ರಾ ಅವರ ಕರಾರುವಕ್ ದಾಳಿಗೆ ತತ್ತಿರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 151 ರನ್‍ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಒಟ್ಟು 292 ರನ್‍ಗಳ ಮುನ್ನಡೆ ಪಡೆಯಿತು.

ಮೆಲ್ಬೊರ್ನ್ ಅಂಗಳದಲ್ಲಿ ನಡೆದ ಮೂರನೇ ದಿನದಾಟ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‍ಗಳು ಮೆರೆದಾಡಿದ್ರು. ವೇಗಿ ಇಶಾಂತ್ ಆರಂಭಿಕ ಬ್ಯಾಟ್ಸ್‍ಮನ್ ಆರಾನ್ ಫಿಂಚ್ ಅವರ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದ್ರು. ನಂತರ ದಾಳಿಗಿಳಿದ ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬುಮ್ರಾ ಆಸಿಸ್ ಬ್ಯಾಟ್ಸ್‍ಮನ್‍ಗಳಿಗೆ ಕಂಟಕವಾದ್ರು.

ಕರಾರುವಕ್ ಸ್ಪೆಲ್ ಮಾಡಿದ ಬುಮ್ರಾ, ಹ್ಯಾರಿಸ್(22),ಶಾನ್ ಮಾರ್ಷ್(19), ಟಿಮ್ ಪೇನ್(22), ನಾಥನ್ ಲಿಯಾನ್(0), ಹೆಜ್ಲ್‍ವುಡ್(0) ವಿಕೆಟ್ ಪಡೆದು ಆಸಿಸ್ ಸರ್ವ ಪತನಕ್ಕೆ ಕಾರಣರಾದ್ರು. ಇದರೊಂದಿಗೆ ಜಸ್‍ಪ್ರೀತ್ ಬುಮ್ರಾ ಕೇವಲ 33 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದ್ರು.ರವೀಂದ್ರ ಜಡೇಜಾ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದ್ರು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್‍ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ