
ಬೆಂಗಳೂರು: ಕಿರುತೆರೆಯಲ್ಲಿ ಮಿಂಚಿದ್ದ ನಟಿ ಶರಣ್ಯ ಇದೀಗ ನಾತಿ ಚರಾಮಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ನೀಡಿದ್ದಾರೆ.
ಕಿರುತೆರೆ ಮೂಲಕ ಬೆಳಕಿಗೆ ಬಂದ ಶರಣ್ಯ ಶೃತಿ ಹರಿಹರನ್ ನಟನೆಯ ನಾತಿ ಚರಾಮಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಅಥವಾ ಸಿನಿಮಾ ಯಾವುದೇ ಆದರೂ ಅಭಿನಯ ಎಂಬುದು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ,
ನಾತಿ ಚರಾಮಿ ಸಿನಿಮಾದಲ್ಲಿ ಸುಮ ಎಂಬ ಗೃಹಿಣಿ ಪಾತ್ರದಲ್ಲಿ ನಟಿಸಿದ್ದಾರೆ, ಗ್ರಾಮದ ವಿದ್ಯಾವಂತ ಮಹಿಳೆಯಾಗಿ ಗಂಡನ ಪ್ರೀತಿ ಬಯಸುವ ಹೆಂಡತಿ ಪಾತ್ರ ತಮ್ಮದು ಎಂದು ಶರಣ್ಯ ತಿಳಿಸಿದ್ದಾರೆ.