ಬೆಂಗಳೂರು,ಡಿ.26- ಇತ್ತೀಚೆಗೆ ನಿಧನರಾದ ಸಗಾಯಿಪುರಂ ವಾರ್ಡ್ನ ಬಿಬಿಎಂಪಿಯ ಪಕ್ಷೇತರ ಸದಸ್ಯ ಏಳುಮಲೆ ಹಾಗೂ ಸೂಲಗಿತ್ತಿ ನರಸಮ್ಮ ಅವರಿಗೆ ಪಾಲಿಕೆ ಸಭೆಯಲ್ಲಿಂದು ಶ್ರದ್ದಾಂಜಲಿ ಸಲ್ಲಿಸಿ ಸಭೆಯನ್ನು ನಾಳೆಗೆ ಮುಂದೂಡಲಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಒಂದು ನಿಮಿಷ ಮೌನ ಆಚರಿಸಿ ಏಳುಮಲೆ ಹಾಗೂ ನರಸಮ್ಮ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರ ನಾರಾಯಣ್, ಮಾಜಿ ಮೇಯರ್ಗಳಾದ ಜಿ.ಪದ್ಮಾವತಿ, ಮಂಜುನಾಥ್ ರೆಡ್ಡಿ ಮತ್ತಿತರ ಸದಸ್ಯರು ಅಗಲಿದವರ ಗುಣಗಾನ ಮಾಡಿದರು.
ವೈದ್ಯರ ನಿರ್ಲಕ್ಷ್ಯದಿಂದ ಏಳುಮಲೆ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಅದರ ತನಿಖೆ ಏನಾಯ್ತು ಗೊತ್ತಿಲ್ಲ. ನಗರದಲ್ಲಿ ಬೇಕಾದಷ್ಟು ಬೇಜಾವಬ್ದಾರಿ ಆಸ್ಪತ್ರೆಗಳಿಗೆ ಅವುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಮೇಯರ್ ಗಂಗಾಂಬಿಕೆ ಮಾತನಾಡಿ, ಏಳುಮಲೆ ತಮ್ಮ ವಾರ್ಡ್ನಲ್ಲಿ ಅನ್ನದಾತ ಎಂದೇ ಹೆಸರು ಪಡೆದಿದ್ದರು ಎಂದು ಸ್ಮರಿಸಿದರು.
ಸೂಲಗಿತ್ತಿ ನರಸಮ್ಮ ಅವರು 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಇಂಥವರಿಗೆ ಬಿಬಿಎಂಪಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ ಎಂದು ಹೇಳಿ ಸಭೆಯನ್ನು ನಾಳೆಗೆ ಮುಂದೂಡಿದರು.