ದೇವರನ್ನು ರಾಜಕೀಯಕ್ಕೆ ಎಳೆತಂದಿದ್ದೇ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ: ರಾಜ್ ಬಬ್ಬರ್

ಲಖನೌ: ದೇವರನ್ನು ರಾಜಕೀಯಕ್ಕೆ ಎಳೆದು ತಂದಿರಿ. ಅದಕ್ಕೇ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸುವಂತಾಯಿತು ಎಂದು ಉತ್ತರಪ್ರದೇಶದ ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ ತಿಳಿಸಿದ್ದಾರೆ.

ಹನುಮಂತನ ಜಾತಿ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ. ಹನುಮಂತನಿಗೆ ಬಹಳ ತೊಂದರೆ ಕೊಡಬೇಡಿ. ಅವನ ಬಾಲದ ಹೊಡೆತದಿಂದ ನೀವು ಚುನಾವಣೆಯಲ್ಲಿ ಸೋತಿದ್ದೀರಿ. ಇದೇ ಮುಂದುವರಿದರೆ ನಿಮ್ಮ ಲಂಕೆಗೆ ಬೆಂಕಿ ಬೀಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹನುಮಂತ ದಲಿತ ಜಾತಿಗೆ ಸೇರಿದವನು ಎಂದಿದ್ದರು. ನಂತರ ಅನೇಕ ರಾಜಕೀಯ ಮುಖಂಡರು ಹನು ಮಂತ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಆತ ಮುಸ್ಲಿಂ, ಜಾಟ್​, ಗೋಂಡ್​ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

‘Don’t trouble Hanuman too much, your Lanka will be on fire’: Raj Babbar to BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ