ಮೆಲ್ಬೋರ್ನ್: ನಾಳೆಯಿಂದ ಮೇಲ್ಬೋರ್ನ್‍ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಅರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದೆ.
ತಂಡದ ಓಪನರ್‍ಗಳಾದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನ ಕೈಬಿಡಲಾಗಿದ್ದು ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್‍ವಾಲ್ ಮತ್ತು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೆಜಾಗೆ ಮಣೆ ಹಾಕಲಾಗಿದೆ.
ಈ ಹಿಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಉತ್ತಮ ಆರಂಭ ಕೊಡದೇ ವೈಫಲ್ಯದ ಮೇಲೆ ವೈಫಲ್ಯ ಅನುಭವಿಸಿದ್ರು. ಇದು ತಂಡದ ಬ್ಯಾಟಿಂಗ್ ವಿಭಗದ ಮೇಲೆ ಭಾರಿ ಪರಿಣಾಮ ಬೀರಿ ಸೋಲಿಗೂ ಕಾರಣವಾಗಿತ್ತು.
ಇನ್ನು ಗಾಯದ ಸಮಸ್ಯೆಯಿಂದ ಬಲುತ್ತಿರುವ ಆರ್.ಅಶ್ವಿನ್ ಮೂರನೇ ಟೆಸ್ಟ್ ಪಂದ್ಯದಿಂದಲೂ ಹೊರ ನಡೆದಿದ್ದಾರೆ. ಅಶ್ವಿನ್ ಬದಲಿಗೆ ಸ್ಪಿನ್ ವಿಭಾಗವನ್ನ ರವೀಂದ್ರ ಜಡೇಜಾ ಮುನ್ನೆಡಸಲಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್‍ಗೆ ಟೀಂ ಇಂಡಿಯಾ
ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ(ಉಪನಾಯಕ), ಹನುಮ ವಿಹಾರಿ. ಮಯಾಂಕ್ ಅಗರ್‍ವಾಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ರಿಷಭ್ ಪಂತ್, ರವೀಂದ್ರ ಜಡೇಜಾ, ಮೊಹ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‍ಪ್ರೀತ್ ಬುಮ್ರಾ