ಕೊನೆಗೂ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಕನ್ನಡಿಗ ಮಯಾಂಕ್ ಅಗರ್‍ವಾಲ್

ಮೆಲ್ಬೋರ್ನ್: ಅವಕಾಶಗಳಿಗಾಗಿ ಕಾದು ಕಾದು ಸುಸ್ತಾಗಿದ್ದ ಕನ್ನಡಿಗ ಮಯಾಂಕ್ ಅಗರ್‍ವಾಲ್ ಕೊನೆಗೂ ಟೀಂ ಇಂಡಿಯಾದಲ್ಲಿ ಆಡಲಿದ್ದರೆ.

ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ್ದ ಮಯಾಂಕ್ ಅಗರ್‍ವಾಲ್ ಕರ್ನಾಟಕದ ವೀರೇಂದ್ರ ಸೆಹ್ವಾಗ್ ಎಂದೇ ಗುರುತಿಸಿಕೊಂಡಿದ್ರು. ದೇಸಿ ಟೂರ್ನಿಯಲ್ಲಿ ಯಾರು ಮಾಡದ ದಾಖಲೆಯನ್ನ ಮಾಡಿದ್ದರು ಈ ಕನ್ನಡಿಗನಿಗೆ ಮಾತ್ರ ಆಡುವ ಅವಕಾಶ ಸಿಕ್ಕಿರಲಿಲ್ಲ. ದೇಸಿ ಟೂರ್ನಿಗಳಲ್ಲಿ ಅಬ್ಬರಿಸಿದಾಗಲೆಲ್ಲ ಮಯಾಂಕ್ ಟೀಂ ಇಂಡಿಯಾದ ಬಾಗಿಲು ಬಡಿಯುತ್ತಲ್ಲೇ ಇದ್ದರು. ಆದರೂ ಅವಕಾಶ ಅನ್ನೋದು ದೂರದ ಮಾತಾಗಿತ್ತು. ಮಯಾಂಕ್ ಅಗರ್‍ವಾಲ್ ಕೆಲವು ತಿಂಗಳ ಹಿಂದೆ ದುಬೈನಲ್ಲಿ ಏಷ್ಯಕಪ್ ಟೂನಿಗೆ ಆಯ್ಕೆಯಾಗಿದ್ದರು. ಆಗ ಮಯಾಂಕ್ ಖುಷಿಗೆ ಪಾರವೇ ಇರಲಿಲ್ಲ. ಆದರೆ ಮಯಾಂಕ್ ಒಂದು ಅವಕಾಸವನ್ನ ಪಡೆಯದೇ ನಿರಾಸೆ ಅನುಭವಿಸಿದ್ರು. ನಂತರ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಅಡುತ್ತರೆ ಅನ್ನೋ ಆಸೆ ಮತೆ ಚಿಗೊರೊಡೆಯಿತು ಆದರೆ ಮರಿ ಸಚಿನ್‍ಗೆ ಅವಕಾಶ ಕೊಡಲಾಯಿತು.ಇಲ್ಲೂ ಕೂಡ ಮಯಾಂಕ್ ಮತ್ತೆ ನಿರಾಸೆ ಅನುಭವಿಸಬೇಕಾಯಿತು. ಇದೀಗ ಅಸಿಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ತಂಡದ ಬ್ಯಾಟ್ಸ್‍ಮನ್‍ಗಳು ವೈಫಲ್ಯ ಅನುಭವಿಸುತ್ತಿರೋದ್ರಿಂದ ಮಯಾಂಕ್ ಅಗರ್‍ವಾಲ್‍ಗೆ ಅವಕಶ ನೀಡಲಾಗಿದೆ. 27 ವರ್ಷದ ಮಯಾಂಕ್ ಅಗರ್‍ವಾಲ್ ಅವಕಾಶವನ್ನ ಹೇಗೆ ಬಾಚಿಕೊಳ್ಳುತ್ತಾರೆ ಅನ್ನೋದರ ಮೇಲೆ ಕರ್ನಾಟಕ ತಂಡದ ಓಪನರ್‍ನ ಭವಿಷ್ಯಾ ನಿಂತಿದೆ.

ಮಯಾಂಕ್ ಅಗರ್‍ವಾಲ್ ಮೊದಲದರ್ಜೆಕ್ರಿಕೆಟ್‍ನಲ್ಲಿ 75 ಪಂದ್ಯಗಳನ್ನಾಡಿದ್ದು 50 ಸರಾಸರಿ ಹೊಂದಿದ್ದಾರೆ.ಕಳೆದ ವರ್ಷ ನಡೆದ ರಣಜಿ ಟೂರ್ನಿಯಲ್ಲಿ ತ್ರಿ ಶತಕ ಬಾರಿಸಿ ಮಿಂಚಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ