ನವದೆಹಲಿ: ವಿಶ್ವದೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಜಗತ್ತಿಗೆ ಶಾಂತಿಮಂತ್ರ ಬೋಧಿಸಿದ ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
ವಿವಿಧ ಚರ್ಚ್ ಗಳಲ್ಲಿ ಮಧ್ಯರಾತ್ರಿಯಿಂದಲೇ ಶ್ರದ್ದಾ, ಭಕ್ತಿಯಿಂದ ಕ್ರಿಸ್ ಮಸ್ ಆಚರಿಸಲಾಗುತ್ತಿದ್ದು, ಕೇಕ್ ಕತ್ತರಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಯೇಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ.
ಕ್ರಿಸ್ ಮಸ್ ಪ್ರಯುಕ್ತ ಬೆಂಗಳೂರಿನ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರೆಲ್ ಚರ್ಚ್ ನಲ್ಲಿ ಮಧ್ಯರಾತ್ರಿಯಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಲಾಯಿತು. ಗೋವಾ ರಾಜಧಾನಿ ಪಣಜಿಯಲ್ಲಿನ ಚರ್ಚ್ ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಸಂಖ್ಯಾತ ಕ್ರೈಸ್ತರು ಭಾಗವಹಿಸಿದ್ದರು.
ಮುಂಬೈಯಲ್ಲಿನ ಸೆಂಟ್ ಮೈಕೆಲ್ ಚರ್ಚ್ ಹಾಗೂ ದೆಹಲಿಯ ಸ್ಯಾಕ್ರಿಡ್ ಹಾರ್ಟ್ ಕ್ಯಾಥಿಡ್ರಲ್ ಚರ್ಚೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ರಿಸ್ ಮಸ್ ಹಬ್ಬದ ನಿಮಿತ್ತ ಚರ್ಚ್ನ ಹೊರ ಭಾಗದಲ್ಲಿ ದೀಪಾಲಂಕರ ಮಾಡಲಾಗಿದ್ದು, ಒಳಭಾಗದಲ್ಲಿನ ಪ್ರಾರ್ಥನಾ ಸಭಾಂಗಣದಲ್ಲಿ ಏಸು ಹುಟ್ಟಿದ ಬೇತಲ್ಹೇಮ್ನ ಗೋದಾಲಿ ಸಿದ್ಧಪಡಿಸಲಾಗಿದೆ.ಪ್ರಾರ್ಥನ ಸ್ಥಳಗಳಲ್ಲಿ ಡಿಸೆಂಬರ್ ಟ್ರೀಗಳ ಮಾದರಿಯನ್ನು ಇರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.