ಗುವಾಹಟಿ: ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡಿದ್ದ ದೇಶದ ಅತಿ ಉದ್ದದ ಸೇತುವೆ ಬೋಗಿಬೇಲ್ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ.
2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಆರಂಭವಾದ 16 ವರ್ಷಗಳ ನಂತರ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 4.94 ಕಿ.ಮೀ. ಉದ್ದವಿರುವ ಈ ಸೇತುವೆ ದೇಶದ ಅತಿದೊಡ್ಡ ರೈಲ್ವೆ ಮತ್ತು ರಸ್ತೆ ಮಾರ್ಗದ ಸೇತುವೆಯಾಗಿದೆ. ಒಟ್ಟು 5,920 ಕೋಟಿ ರೂ. ಮೊತ್ತದ ಯೋಜನೆಯ ಈ ಸೇತುವೆಯೂ ಎರಡು ರೈಲ್ವೆ ಹಳಿ ಮತ್ತು ಅದರ ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಮಾರ್ಗವನ್ನು ಒಳಗೊಂಡಿದೆ.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಸೇತುವೆ ಉದ್ಘಾಟಿಸಿದಾಗ ನಾನು ಶಾಲೆಯಲ್ಲಿ ಓದುತ್ತಿದ್ದೆ. ಕೆಲ ವರ್ಷಗಳ ನಂತರ ಈ ಸೇತುವೆ ನನ್ನ ಕನಸಿನ ಯೋಜನೆಯಾಯಿತು. ಅಂತೂ ಕೊನೆಗೂ ಹಲವು ಅಡೆತಡೆಗಳನ್ನು ದಾಟಿ, ಇಂದು ಯೋಜನೆ ಪೂರ್ಣಗೊಂಡಿದೆ ಎಂದು ಯೋಜನೆಯ ಪ್ರಮುಖ ರೂವಾರಿ ಭಾಸ್ಕರ್ ಗೋಗೋಯ್ ಹೇಳುತ್ತಾರೆ.
ಅಸ್ಸಾಂ ಮತ್ತು ಅರುಣಾಚಲಪ್ರದೇಶದ ನಿವಾಸಿಗಳ ಈ ರೈಲು ಮತ್ತು ರಸ್ತೆಯ ಡಬಲ್ ಡೆಕ್ಕರ್ ಸೇತುವೆ ನಿರ್ಮಾಣ ಪೂರ್ಣಕ್ಕೆ 21 ವರ್ಷಗಳಿಂದ ಕಾಯುತ್ತಿದ್ದರು. ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ ಈ ರೈಲು ಮತ್ತು ಬಸ್ ಸೇತುವೆಯಿಂದಾಗಿ ಅಸ್ಸಾಂನ ತಿನಸುಕಿಯಾ ನಗರಕ್ಕೂ ಮತ್ತು ಅರುಣಚಲಪ್ರದೇಶದ ನಹರಲಗುನ್ ನಗರದ ನಡುವೆ ಕ್ಕೂ ಓಡಾಟಕ್ಕೆ ಹತ್ತು ಗಂಟೆಗಳ ಅವಧಿ ಉಳಿಯುತ್ತದೆ.
ಈಶಾನ್ಯ ಭಾಗದಲ್ಲಿ ಮೂರನೇ ಅತಿದೊಡ್ಡ ನಗರವಾಗಿರುವ ದಿಬ್ರುಗಾವ್ ನಗರ ಪ್ರಮುಖ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಮತ್ತು ವಿಮಾನ ನಿಲ್ದಾಣ ಒಳಗೊಂಡಿದ್ದು, ಈ ನಗರಕ್ಕೆ ಸಂಚರಿಸಲು ಜನರಿಗೆ ಈ ಸೇತುವೆ ಸಾಕಷ್ಟು ಉಪಯೋಗವಾಗಲಿದ.