ಡಿ. 27ರಿಂದ ಡಿ.29ರವರೆಗೆ ಕನ್ನಡ ರಣದೀರರ ಪಡೆ ವತಿಯಿಂದ 63ನೇ ರಾಜ್ಯೋತ್ಸವ

ಬೆಂಗಳೂರು, ಡಿ.25- ಕನ್ನಡ ರಣಧೀರರ ಪಡೆ ವತಿಯಿಂದ 63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 33ನೇ ವಾರ್ಷಿಕೋತ್ಸವ ಸಮಾರಂಭವನ್ನು ಇದೇ 27ರಿಂದ 29ರವರೆಗೆ ಇಂದಿರಾನಗರದ ದೊಪನಹಳ್ಳಿಯ ಮುತ್ಯಾಲಮ್ಮ ದೇವಿ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದೆ.

ಡಿ.27ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ರೋಹನ್ ಬಿಲ್ವರ್ಸ್ ಇಂಡಿಯಾ ಪ್ರೈನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂತೋಷ್ ಲಂಕಡ್ ನೆರವೇರಿಸಲಿದ್ದು, ನಾಡಧ್ವಜಾರೋಹಣವನ್ನು ಹಿರಿಯ ಪರಿಸರ ಅಧಿಕಾರಿ ಎಂ.ಲಕ್ಷ್ಮಣ್ ಮಾಡಲಿದ್ದಾರೆ. ಸಂಜೆ 6ಕ್ಕೆ ಕೀಲುಕುದುರೆ ಮತ್ತು ಬೊಂಬೆಗಳ ನೃತ್ಯದೊಂದಿಗೆ ನಾಡದೇವಿ ತಾಯಿ ಭುವನೇಶ್ವರಿ ದೇವಿ ಪಲ್ಲಕಿಯ ಮೆರವಣಿಗೆ ಮಾಡಲಾಗುವುದು.

ಡಿ.28ರಂದು ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎನ್.ಎ.ಹ್ಯಾರಿಸ್, ಇಂದಿರಾನಗರ ಠಾಣೆ ಇನ್ಸ್‍ಪೆಕ್ಟರ್ ಪಿ.ರವಿ, ಕಾಂಗ್ರೆಸ್ ಮುಖಂಡ ಎಂ.ಬಿ.ನಾಚಪ್ಪ, ಪಾಲಿಕೆ ಸದಸ್ಯ ಸಿ.ಆರ್.ಲಕ್ಷ್ಮೀನಾರಾಯಣ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಡಿ.29ರಂದು ಸಂಜೆ 6 ಗಂಟೆಗೆ ಯುವಾಸ್ ಮ್ಯೂಸಿಕ್ ತಡದಿಂದ ವಾದ್ಯಗೋಷ್ಠಿ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಕಾಂಗ್ರೆಸ್ ಮುಖಂಡ ಬಿಡಿಎ ಬಾಲಾ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ