ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಸಂಬಂಧ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿದ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ

ಬೆಂಗಳೂರು,ಡಿ.24- ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸಾಕ್ಷರತಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಂಬಂಧ ಪ್ರಚಾರ ಸಾಮಾಗ್ರಿಗಳನ್ನು ಲೋಕ ಶಿಕ್ಷಣ ನಿರ್ದೇಶನಾಲಯ/ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬಿಡುಗಡೆಗೊಳಿಸಿದೆ.

ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ 19 ಜಿಲ್ಲೆಗಳ 95 ತಾಲೂಕುಗಳ ಹಿಂದುಳಿದ ಗ್ರಾ.ಪಂಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯದ 20 ಜಿಲ್ಲೆಗಳ ನಗರ, ಕೊಳೆಗೇರಿಗಳಲ್ಲಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು, ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಲ್ಲಿನ ಅನಕ್ಷರಸ್ಥ ಮಹಿಳೆಯರನ್ನು ಶಿಕ್ಷಿತರನ್ನಾಗಿಸುವ ಗುರಿ ಹೊಂದಲಾಗಿದೆ.

ಹೈದರಾಬಾದ್-ಕರ್ನಾಟಕ ಪ್ರದೇಶದ 6 ಜಿಲ್ಲೆಗಳಲ್ಲಿ 1500 ಗ್ರಾ.ಪಂಗಳ ಅನಕ್ಷರಸ್ಥ ಸದಸ್ಯರಿಗೆ 21 ದಿನಗಳ ಕಾಲ ಶಿಬಿರ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ ಕಾರ್ಯಕ್ರಮ ಪರಿಕಲ್ಪನೆ ಕುರಿತು ಒಟ್ಟು ನಾಲ್ಕು ಭಿತ್ತಿ ಚಿತ್ರಗಳು, ಒಂದು ಸ್ಟಿಕ್ಕರ್ ಮತ್ತು ಮಡಿಕೆ ಹಾಳೆಯನ್ನು ವಿತರಿಸಲು ಸಿದ್ದಪಡಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಮತ್ತು ಲೋಕ ಶಿಕ್ಷಣ ನಿರ್ದೇಶಾಲಯದ ನಿರ್ದೇಶಕ ಕೆ.ಎನ್.ವಿಜಯ ಮತ್ತಿತರರು ಪ್ರಚಾರ ಸಾಮಾಗ್ರಿ ಬಿಡುಗಡೆಗೊಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ