ಮೆಲ್ಬೋರ್ನ್: ಬಾಲಿವುಡ್ ಬಾದ್ ಶಾ, ಮಿಲ್ಕಿ ಬ್ಯುಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅಭಿನಯದ ಜೀರೊ ಚಲನಚಿತ್ರ ಕಳೆದ ಕೆಲವು ದಿನಗಳಿಂದ ಸದ್ದು ಮಡಿತಿದೆ.
ಸಧ್ಯ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಆಸ್ಟ್ರೇಲಿಯಾದಲ್ಲಿದ್ದಾರೆ.ಇದೀಗ ಬಹು ನಿರೀಕ್ಷಿತಾ ಚಿತ್ರ ಜೀರೊ ಬಿಡುಗಡೆಯಾಗಿರೋದ್ರಿಂದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿನ್ನೆ ಮೆಲ್ಬೋರ್ನ್ ಮಾಲ್‍ವೊಂದರಲ್ಲಿ ತಮ್ಮ ಸಿನಿಮಾವನ್ನ ನೋಡಿ ಖುಷಿಪಟ್ಟಿದ್ದಾರೆ.
ಆದರೆ ವಿರಾಟ್ ಕೊಹ್ಲಿ ಜೊತೆ ತಂಡದ ಯಾವ ಆಟಗಾರರು ಇಲ್ಲದೇ ಇರೋದು ಕೆಲವು ಅನುಮಾನಗಳು ಹುಟ್ಟಿಕೊಂಡಿವೆ.
ಪರ್ತ್ ಟೆಸ್ಟ್ ಪಂದ್ಯz ಸೋಲಿನ ಬಳಿಕ ತಂಡದದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂಬಮಾತುಗಳು ಕೇಳಿ ಬಂದಿವೆ. ಏನೆ ಆಗಿದ್ದರೂ ಪತ್ನಿ ಜೊತೆ ಜೀರೋ ಸಿನಿಮಾ ವೀಕ್ಷಿಸಿರುವ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣ ವಿಶ್ರಾಂತಿ ಪಡೆದಿದ್ದಾರೆ.