ಬೆಂಗಳೂರು, ಡಿ.23- ಶ್ರೀ ರುದ್ರಂ ವತಿಯಿಂದ ನಗರದ ಮಹಾಲಕ್ಷ್ಮಿ ಲೇಔಟ್‍ನ ನಾಗಪುರ ವಾರ್ಡ್‍ನ ಹಿಂದೂ ಸಾದರ ಸಮುದಾಯ ಭವನದಲ್ಲಿ ಡಿ.24ರಿಂದ ಜ.6ರ ವರೆಗೆ ಲೋಕ ಕಲ್ಯಾಣಾರ್ಥವಾಗಿ ಅತಿರುದ್ರ ಮಹಾಯಜ್ಞ, ಶತಚಂಡಿಹೋಮ ಮತ್ತು ಶಾಸ್ತಾಪ್ರೀತಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ಶಾಸಕ ಗೋಪಾಲಯ್ಯ ಅವರು ನಾಳೆ ಬೆಳಗ್ಗೆ ಮಹಾಗಣಪತಿ ಹೋಮ, ಗುರುವಂದನೆ, ಅಂಕುರಾರ್ಪಣೆ, ಮಹಾಸಂಕಲ್ಪ, ಕಳಶ ಸ್ಥಾಪನೆ, ಶ್ರೀರುದ್ರ ಜಪ, ರುದ್ರಾಭಿಷೇಕ ಕಾರ್ಯಕ್ರಮಗಳ ಮೂಲಕ ಅತಿರುದ್ರ ಮಹಾಯಾಗ ಪ್ರಾರಂಭವಾಗಲಿದೆ.
ಶತಚಂಡಿ ಹೋಮ, ಮೀನಾಕ್ಷಿ ಸುಂದರೇಶ್ವರ ಕಲ್ಯಾಣ ಮಹೋತ್ಸವ, ಶಾಸ್ತಾಪ್ರೀತಿ ಕಾರ್ಯಕ್ರಮ ನೆರವೇರಲಿದೆ. ಪ್ರತಿನಿತ್ಯ ಹೋಮ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
28ರಂದು ಪೂರ್ಣಾಹುತಿ ಕಾರ್ಯಕ್ರಮವಿದ್ದು, ಅಂದು ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.ಜ.3ರಂದು ಅತಿರುದ್ರ ಮಹಾಯಾಗದ ಪೂರ್ಣಾಹುತಿ ಕಾರ್ಯಕ್ರಮವಿದೆ. ವಿಶಾಖಪಟ್ಟಣದ ಅದ್ವಯಾನಂದ ಸರಸ್ವತಿ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಿ.ಎಸ್.ಸುಂದರ್, ರಾಘವೇಂದ್ರ ಭಟ್, ಮುರಳೀಧರ್ ಶರ್ಮ, ಪಾಲಿಕೆ ಸದಸ್ಯರಾದ ಮಹದೇವ್, ಪಿ.ವಿ.ಗುರುವಾಯುರಪ್ಪ ಮತ್ತಿತರರು ಇದ್ದರು.