
ಬೆಂಗಳೂರು, ಡಿ.23- ಅಪರಾಧ ಮಾಸಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂದು ಬೆಳಗ್ಗೆ ಜೆಸಿ ನಗರ ಉಪವಿಭಾಗ ಪೆÇಲೀಸರು ಬೈಕ್‍ರ್ಯಾಲಿ ಹಮ್ಮಿಕೊಂಡರು.
ಬೈಕ್ ರ್ಯಾಲಿಗೆ ಡಿಸಿಪಿ ರವಿ ಡಿ.ಚನ್ನಣ್ಣನವರ್ ಚಾಲನೆ ನೀಡಿದರು.ಜೆಸಿ ನಗರ ಪೊಲೀಸರು ಹಮ್ಮಿಕೊಂಡಿದ್ದ ಈ ಜಾಗೃತಿ ರ್ಯಾಲಿಗೆ ಹಾರ್ಲೆ ಡೇವಿಡ್‍ಸನ್ ಬೈಕ್‍ಕ್ಲಬ್‍ನವರು ಸಾಥ್ ನೀಡಿದರು.
ಜೆಸಿ ನಗರದ ಸ್ನೋಸಿಟಿ ಬಳಿಯಿಂದ ಪ್ರಾರಂಭವಾದ ಬೈಕ್ ರ್ಯಾಲಿ ಹೆಬ್ಬಾಳ ಮಾರ್ಗವಾಗಿ ಆರ್‍ಟಿ ನಗರ, ಎಚ್‍ಎಂಟಿ ಗ್ರೌಂಡ್‍ವರೆಗೂ ನಡೆಯಿತು.