ಬೆಂಗಳೂರು, ಡಿ.22-ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ಕೊಟ್ಟು ಈ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ ಭಾಷಾ ಸಾಹಿತ್ಯ ಮಾನ್ಯತೆಯ ಬೆಳವಣಿಗೆಗೆ ಸಹಕರಿಸುವಂತೆ ತುಳು 8ನೇ ಪರಿಚ್ಛೇದ ಹೋರಾಟ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಅಲೋಕ್ ರೈ, ತುಳು ಭಾಷೆ ಮಾತನಾಡುವವರ ಸಂಖ್ಯೆ ಬೆಂಗಳೂರು ನಗರ ಒಂದರಲ್ಲೇ 10ಲಕ್ಷ ಜನರಿದ್ದು, ವಿಶ್ವದಾದ್ಯಂತ ಸುಮಾರು ಒಂದೂವರೆ ಕೋಟಿ ಜನರು ತುಳು ಭಾಷೆ ಮಾತನಾಡುತ್ತಾರೆ.
ಸಾಹಿತ್ಯಿಕವಾಗಿಯೂ ಮುಂದುವರೆದ ಭಾಷೆಯಾಗಿದ್ದು, ಜಾನಪದ ಕಣಜವಾಗಿಯೂ ಹೊರಹೊಮ್ಮಿದೆ. ಈ ಭಾಷೆ ಕುರಿತು ಪೀಟರ್ ಜೆ.ಕ್ಲಾಸ್, ಲೌರಿ ಹಾಂಕೋ ಇಂತಹ ವಿದೇಶಿ ಸಂಶೋಧಕರು ಆಕರ್ಷಿತರಾಗಿ ಕೆಲವು ಸಂಶೋಧನೆಗಳನ್ನು ಕೈಗೊಂಡಿದ್ದರು. ತುಳುಗೆ ಕನ್ನಡಕ್ಕೂ ಮೊದಲೇ ರೆವರೆಂಡ್ ಮ್ಯಾನರ್ ಎನ್ನುವರು ಎರಡು ಸಂಪುಟಗಳಲ್ಲಿ ಶಬ್ಧಕೋಶವನ್ನು ಕೊಟ್ಟಿದ್ದರು. ಇಂತಹ ಭಾಷೆಯ ಅಸ್ತಿತ್ವಕ್ಕಾಗಿ ರಾಜ್ಯ ಸರ್ಕಾರ ಇದಕ್ಕೆ ಅಧಿಕೃತ ಮಾನ್ಯತೆ ನೀಡಬೇಕಿದೆ ಎಂದರು.
ಸರ್ಕಾರದ ಗಮನ ಸೆಳೆಯಲು ರಾಜ್ಯ, ದೇಶ ಮತ್ತು ವಿದೇಶದ ಎಲ್ಲಾ ತುಳು ಸಂಘಟನೆಗಳ ಬೆಂಬಲದೊಂದಿಗೆ ವಿನೂತನ ರೀತಿಯ ಪೆÇೀಸ್ಟರ್ ಚಳವಳಿಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಅದರಡಿ ರಾಜ್ಯದ ರಾಜಕಾರಣಿಗಳು,ಅಧಿಕಾರಿಗಳಿಗೆ ತುಳು ಉಳಿಸಿ ಎಂಬ ಪೆÇೀಸ್ಟ್ ಕಾರ್ಡನ್ನು ಅವರ ಮನೆ ಹಾಗೂ ಕಚೇರಿಗಳಿಗೆ ತಲುಪಿಸಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಮನವಿ ಮಾಡಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ, ಪಳ್ಳಿ ವಿಶ್ವನಾಥ್ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.