ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಸಂಚಾರವಿಲ್ಲವೆಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ: ತೂಬಗೆರೆ ಗ್ರಾಮದಿಂದ ದೊಡ್ಡಬಳ್ಳಾಪುರ ನಗರಕ್ಕೆ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಸಂಚರಿಸುವ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲವೆಂದು ತೂಬಗೆರೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ತಡೆದು ಟೈರ್ ಗೆ ಬೆಂಕಿ ಹಚ್ಚಿ ವಿದ್ಯಾರ್ಥಿಗಳು ಹಾಗೂ  ಸ್ಥಳಿಯರು  ಪ್ರತಿಭಟನೆ ನೆಡೆಸಿದರು.

ಈ ಸಂದರ್ಭದಲ್ಲಿ ನವಕರ್ನಾಟಕ ಯುವಶಕ್ತಿ ವೇದಿಕೆ ಹೋಬಳಿ ಅಧ್ಯಕ್ಷ  ಉದಯ್ ಆರಾಧ್ಯ ಮಾತನಾಡಿ ತೂಬಗೆರೆ ಗ್ರಾಮದಲ್ಲಿ  ಸುಮಾರು ಮೂರು ಸಾವಿರ ಜನಸಂಖ್ಯೆ ಇದ್ದು ಮುಂಜಾನೆ ಶಾಲಾ ಕಾಲೇಜುಗಳಿಗೆ ಪಾಸ್ ಹೊಂದಿರುವ 200 ವಿದ್ಯಾರ್ಥಿಗಳು ಬೆಳಗ್ಗೆ ನಗರಕ್ಕೆ ತೆರಳುತ್ತಾರೆ ಆದರೆ ಮುಂಚೆ ತೂಬಗೆರೆ ಗ್ರಾಮಕ್ಕೆ ಮಾತ್ರ ಒಂದು ಬಸ್ ಮಿಸಲಿರಿಸಲಾಗಿತ್ತು ಕಲೆಕ್ಷನ್ ಇಲ್ಲ ಎಂಬ ಕಾರಣ ನೀಡಿ ಬಸ್ ಸಂಚಾರವನ್ನು ದಿನಕ್ಕೆ ಎರಡು ಬಾರಿ ಮಾತ್ರ ಸಂಚರಿಸಲಾಗುತ್ತಿದೆ ಅದರಲ್ಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಏಕಕಾಲದಲ್ಲಿ ಸಂಚರಿಸಲು ಆಗುತ್ತಿಲ್ಲ ಇದರಿಂದ ಹಾಡೋನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಬರುವ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ ಈ ಹಿಂದೆ ಡಿಪೊ ವ್ಯವಸ್ಥಾಪಕರಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ ಆದರು ಸಮರ್ಪಕವಾಗಿ ಬಸ್ ನಿರ್ವಹಣೆ ಮಾಡುತ್ತಿಲ್ಲ ವೆಂದು ಹೇಳಿದರು

ಸ್ಥಳಕ್ಕಾಗಮಿಸಿದ ಕೆಎಸ್‍ಆರ್‍ಟಿಸಿ ಸಂಚಾರ ನಿಯಂತ್ರಕರು ಈ ಹಿಂದೆ ನಮಗೆ ಬಸ್ ಸಂಚಾರದ ಬಗ್ಗೆ ಯಾವುದೆ ಲಿಖಿತ  ಮನವಿ ಪತ್ರಗಳು ತಲುಪಿಲ್ಲ ಈಗ ಮನವಿ ಮಾಡಿದ್ದಾರೆ ಇದರಿಂದ ನಮ್ಮ ಘಟಕ ವ್ಯವಸ್ಥಾಪಕರ ಬಳಿ ಮಾತನಾಡಿ ವಿದ್ಯಾರ್ಥಿಗಳು ಸಂಚರಿಸುವ ಸಮಯಕ್ಕೆ  ತೊಂದರೆಯಾಗದಂತೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದು ಮನವಿ ಪತ್ರವನ್ನು ಸ್ವೀಕರಿಸಿದರು ನಂತರ ವಿದ್ಯಾರ್ಥಿಗಳು ಹಾಗೂ ಸ್ಥಳಿಯರು ಪ್ರತಿಭಟನೆಯನ್ನು ಕೈ ಬಿಟ್ಟು ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ