ಬೆಂಗಳೂರು, ಡಿ.22- ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ದಿನಪತ್ರಿಕೆಗಳು ಮಾರಾಟವಾಗುತ್ತಿದೆ. ಉದ್ಯಮದ ಮೂಲ ಲೆಕ್ಕಾಚಾರಗಳನ್ನೂಮೀರಿದ ಒಂದು ವ್ಯವಸ್ಥೆಯಾಗಿ ಪತ್ರಿಕೋದ್ಯಮ ಇಂದು ರೂಪುಗೊಂಡಿದೆ ಎಂದು ಪತ್ರಕರ್ತ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಶಿಕ್ಷಣದ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಮಾಜವು ಹಿಂದೆಂದಿಗಿಂತಲೂ ಇಂದು ಹೆಚ್ಚು ಜಾಗೃತವಾಗಿದೆ. ಬೆರಳ ತುದಿಯಲ್ಲಿ ಮಾಹಿತಿಗಳ ಲಭ್ಯತೆ ಇದೆ. ಆರ್ಟಿಐ ಮೊದಲಾದ ಸೇವೆಗಳು ಜನರಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅರಿವು ಮೂಡಿಸಲು ಸಹಾಯಕವಾಗಿದೆ. ಈ ಎಲ್ಲಾ e್ಞÁನ ದೀವಿಗೆಗಳ ನಡುವೆ ಮಾಧ್ಯಮ ವ್ಯವಸ್ಥೆಯು ಇನ್ನು ಹೆಚ್ಚು ಬಲಗೊಳ್ಳಬೇಕಿತ್ತು. ಬಹುತೇಕ ಪಟ್ಟಭದ್ರ ಹಿತಾಸಕ್ತಿಗಳ ಕೈಗಳಲ್ಲಿ ಸಿಲುಕಿರುವ ಮಾಧ್ಯಮವು ಪೂರ್ವಾಗ್ರಹ ಪೀಡಿತವಾಗಿ ಕಾರ್ಯ ನಿರ್ವಹಿಸುವ ಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನೈಜ ಪತ್ರಿಕೋದ್ಯಮಕ್ಕೆ ಈಗಲೂ ಮಾಧ್ಯಮದಲ್ಲಿ ಅವಕಾಶವಿದೆ. ಸಂವೇದನಾ ಶೀಲರಾಗಿ, ವಿಷಯ e್ಞÁನ ಪಡೆದು ಸೂಕ್ಷ್ಮ ಗ್ರಾಹಿಗಳಾಗಿ ಕಾರ್ಯ ನಿರ್ವಹಿಸಿದರೆ ಇಂದಿಗೂ ಪತ್ರಿಕೋದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕುಲ ಸಚಿವ ಪೆÇ್ರ.ಬಿ.ಕೆ.ರವಿ ಮಾತನಾಡಿ, ಮಾಧ್ಯಮ ಮತ್ತು ಮಾಧ್ಯಮ ಶಿಕ್ಷಣದ ನಡುವೆ ಕಂದಕ ಸೃಷ್ಟಿಯಾಗಿದೆ. ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡುವ ಅವಶ್ಯಕತೆ ಇದೆ. ಮಾಧ್ಯಮ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಪಟ್ಟು ಹಾಗೂ ಪ್ರಾವೀಣ್ಯತೆಯನ್ನು ಶೈಕ್ಷಣಿಕ ಹಂತದಲ್ಲಿ ನೀಡಬೇಕು ಎಂದು ಹೇಳಿದರು.
ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪೆÇ್ರ.ಕೆ.ಆರ್.ವೇಣುಗೋಪಾಲï ಮಾತನಾಡಿ, ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್ ಹಾಗೂ ಟ್ವಿಟರ್ಗಳು ಎಲ್ಲರಿಗೂ ತಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಿದೆ. ಇದು ಮಾಧ್ಯಮ ಕ್ಷೇತ್ರದಲ್ಲಿರುವ ಮಂದಿಗೆ ನಿಜವಾದ ಸವಾಲಾಗಿ ಪರಿಣಮಿಸಿದೆ.ಎಂದು ಹೇಳಿದರು
ಸಂವಹನ ವಿಭಾಗದ ಮುಖ್ಯಸ್ಥ ಡಾ.ಎನ್.ಸಂಜೀವ್ರಾಜ್, ಡಾ.ಬಿ.ಶೈಲಶ್ರೀ, ಪೆÇ್ರ.ಬಿ.ಪಿ ಮಹೇಶ್ ಚಂದ್ರ ಗುರು, ಡಾ.ಎನ್.ಎಸ್.ಅಶೋಕ್ ಕುಮಾರ್, ಮಾಧ್ಯಮ ಅಕಾಡೆಮಿ ಚೇರ್ಮನ್ ಎಂ.ಸಿದ್ದರಾಜು ಮತ್ತಿತರರು ಹಾಜರಿದ್ದರು.