ಹೊಸದಿಲ್ಲಿ : ಕೋರ್ಟ್ ಮುಂದೆ ಶರಣಾಗಲು ತನಗೆ ಇನ್ನೂ 30 ದಿನಗಳ ಕಾಲಾವಕಾಶ ಬೇಕು ಎಂದು ಕೋರಿ ಮುನವಿ ಸಲ್ಲಿಸಿದ್ದ 1984ರ ಸಿಕ್ಖ್ ವಿರೋಧಿ ಗಲಭೆಯ ಅಪರಾಧಿ, ಕಾಂಗ್ರೆಸ್ ಮಾಜಿ ನಾಯಕ, ಸಜ್ಜನ್ ಕುಮಾರ್ ಅವರ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾ ಮಾಡಿ, ಹೆಚ್ಚುವರಿ ಕಾಲಾವಕಾಶವನ್ನು ನಿರಾಕರಿಸಿದೆ ಎಂದು ಎಎನ್ಐ ವರದಿ ತಿಳಿಸಿದೆ.
1984 ಸಿಕ್ಖ್ ವಿರೋಧಿ ಗಲಭೆಯ ಅಪರಾಧಿಯಾಗಿ ಜೀವಾವಧಿ ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ಸಜ್ಜನ್ ಕುಮಾರ್ ಅವರು ತನಗೆ ಕೋರ್ಟಿಗೆ ಶರಣಾಗಲು ಇನ್ನೂ 30 ದಿನಗಳ ಕಾಲಾವಕಾಶ ಬೇಕೆಂದು ಕೋರಿ ನಿನ್ನೆ ಗುರುವಾರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಸಜ್ಜನ್ ಕುಮಾರ್ ಅವರ ಶರಣಾಗತಿ ಕಾಲಾವಕಾವ ವಿಸ್ತರಣೆ ಕೋರಿಕೆಯಲ್ಲಿ ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಹೇಳಿ ಕೋರ್ಟ್ ಆತನ ಕೋರಿಕೆಯನ್ನು ತಿರಸ್ಕರಿಸಿತು.