ಬೆಂಗಳೂರು, ಡಿ.21-ಅಲ್ಪ ಸಂಖ್ಯಾತ ಹಿಂದುಳಿದ ದಲಿತರ ಸಮಿತಿ ಲೋಕಸೇವಾ ಆಯೋಗದ ಅಧ್ಯಕ್ಷರ ಹುದ್ದೆಗೆ ಉತ್ತರ ಕರ್ನಾಟಕದವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್, ಛಲವಾದಿ ಸಮುದಾಯದವರಿಗೆ ನಂತರ ಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಕೋಲಿ ಅಥವಾ ಗಂಗಾಮತ, ಬೇಡರು, ಉಪ್ಪಾರರು, ಗೊಲ್ಲರು, ಲಂಬಾಣಿ, ಬೋವಿ, ಮಡಿವಾಳ, ಸವಿತಾ ಸಮಾಜ ಇತ್ಯಾದಿಯವರು ಅಧ್ಯಕ್ಷರಾಗಬೇಕು.ಇಲ್ಲಿಯ ತನಕ ಕೆಪಿಸಿಎಸ್ಸಿ ಅಧ್ಯಕ್ಷರಾಗಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದರು.
ದಕ್ಷಿಣ ಕರ್ನಾಟಕದ ಅನೇಕ ಮಂದಿ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ, ಉತ್ತರ ಕರ್ನಾಟಕ ದವರಿಗೆ ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ದಕ್ಷಿಣಕನ್ನಡದವರನ್ನು ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಬಾರದು ಎಂದು ಆಗ್ರಹಿಸಿದರು.
ಛಲವಾದಿ ಸಮುದಾಯದವರನ್ನು ಅಧ್ಯಕ್ಷರಾಗಿ ನೇಮಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ರವರಿಗೆ ಮನವಿ ಮಾಡಿದ ಅವರು, ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಕೂಡ ಸರ್ಕಾರದ ಮೇಲೆ ಪ್ರಭಾವ ಬೀರಬೇಕೆಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಹೆಚ್.ಎಸ್.ಸುರೇಶ್ ಮಾಯಪ್ಪ ಕುರಿ, ಮೊಹಮ್ಮದ್ ಯೂಸಫ್, ಪಟೇಲ್ ಮುಂತಾದವರು ಉಪಸ್ಥಿತರಿದ್ದರು.