
ವಿಜಯಪುರ: ಪೊಲೀಸ್ ತರಬೇತಿ ಶಾಲೆಯಲ್ಲಿ ಪರೀಕ್ಷಣಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಪರೀಕ್ಷಣಾರ್ಥಿಯಾಗಿದ್ದ ಸಿಂದಗಿ ತಾಲೂಕಿನ ಬೋರಗಿಯ ಮನೋಹರ (24) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಠಿಣ ನಿರ್ಧಾರ ತಳೆಯುವ ಮುನ್ನ 23 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾನೆ.ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವ ವಿಚಾರವನ್ನು ಬರೆದಿರುವುದು ಕಂಡು ಬಂದಿದೆ.
ಮನೋಹರ್ ಯುವತಿಯ ಮನೆಯವರು ಹಲ್ಲೆ ನಡೆಸಿದ ಕಾರಣ ಮನನೊಂದಿದ್ದಾನೆ ಎಂದು ಹೇಳಲಾಗಿದೆ.
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.