ಭಾರತದಲ್ಲಿ ಕ್ಲೀನ್ ಟು ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಲಿರುವ ಆರ್.ಎಲ್.ಜಿ

ಬೆಂಗಳೂರು, ಡಿ.20-ವಿದ್ಯುನ್ಮಾನ ತ್ಯಾಜ್ಯದಿಂದ ಪರಿಸರ ಸಂಬಂಧಿ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಆರ್‍ಎಲ್‍ಜಿ ಈಗ ಭಾರತದಲ್ಲಿ ಕ್ಲೀನ್ ಟು ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಉಪಕ್ರಮದಡಿ ಮಾಹಿತಿ ತಂತ್ರಜ್ಞಾನ ಉತ್ಪಾದಕರ ಸಂಸ್ಥೆ(ಎಂಎಐಟಿ)ಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ಕ್ಲೀನ್ ಟು ಗ್ರೀನ್ ಅಭಿಯಾನವನ್ನು 26 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು ಮತ್ತು 30 ನಗರಗಳಲ್ಲಿ ನಡೆಸಲಿದೆ.

ಈ ವಿದ್ಯುನ್ಮಾನ ತ್ಯಾಜ್ಯದಿಂದ ಪರಿಸರಕ್ಕೆ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಕಡೆಗೆ ಪ್ರಾಥಮಿಕವಾಗಿ ಗಮನಹರಿಸಲು ಶಾಲೆಗಳು, ಕಾಲೇಜುಗಳು, ಆರ್‍ಡಬ್ಲ್ಯುಎಗಳು, ಸಗಟು ಬಳಕೆದಾರರು, ಡೀಲರ್‍ಗಳು, ಪುನರ್ಬಳಕೆದಾರರು, ಅನೌಪಚಾರಿಕ ಕ್ಷೇತ್ರ ಮತ್ತು ಉತ್ಪಾದಕರು ಸೇರಿದಂತೆ ಎಲ್ಲಾ ಪಾಲುದಾರರನ್ನು ತಲುಪುವ ಉದ್ದೇಶ ಹೊಂದಲಾಗಿದೆ.

ಇ-ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಡಿಜಿಟಲï ಇಂಡಿಯಾ ಮತ್ತು ಸ್ವಚ್ಛ ಭಾರತ್‍ನಡಿ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಅತ್ಯಂತ ಹೆಚ್ಚು ಇ-ತ್ಯಾಜ್ಯ ಉತ್ಪಾದಕರ ಪೈಕಿ ಭಾರತ 5ನೇ ಸ್ಥಾನದಲ್ಲಿದ್ದು, (2016ರಲ್ಲಿ ದೇಶ 2 ದಶಲಕ್ಷ ಟನ್ ಇ-ತ್ಯಾಜ್ಯ ಉತ್ಪಾದಿಸಿತ್ತು.) ಇ-ತ್ಯಾಜ್ಯದ ಜವಾಬ್ದಾರಿಯುತ ವಿಲೇವಾರಿ ಮತ್ತು ಪುನರ್ಬಳಕೆಯ ಖಾತ್ರಿಗಾಗಿ ಈ ಅಭಿಯಾನ ಸಹಾಯಕವಾಗಲಿದೆ.

ಎಂಎಐಟಿಯ ಸಿಇಒ ಅನ್ವರ್ ಶಿರ್‍ಪುರ್ ವಾಲಾ ಮಾತನಾಡಿ, ಇ-ತ್ಯಾಜ್ಯ ನಿರ್ವಹಣೆ ಭಾರತದಲ್ಲಿ ಅತ್ಯಂತ ಅಸಂಘಟಿತ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲೆಡೆ ಇರುವ 30 ನಗರಗಳ ಹಲವಾರು ಪಾಲುದಾರರನ್ನು ತಲುಪಲು ಮತ್ತು ಜಾಗೃತಿ ಮೂಡಿಸಲು ಮಾಹಿತಿ ಮತ್ತು ತಂತ್ರಜ್ಞಾನದ ಸಂಗ್ರಹಣೆ, ಸಂಸ್ಕರಣೆ ಮತ್ತು ಹರಡುವಿಕೆಗೆ ಎಂಎಐಟಿ ಬದ್ಧತೆ ಹೊಂದಿದೆ ಎಂದರು.

ಆರ್‍ಎಲ್‍ಜಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಾಧಿಕಾ ಕಾಲಿಯಾ ಮಾತನಾಡಿ, ಇ-ತ್ಯಾಜ್ದದ ಜವಾಬ್ದಾರಿಯುತ ವಿಲೇವಾರಿ ಮತ್ತು ಪುನರ್ಬಳಕೆ ರಾಷ್ಟ್ರೀಯ ಆದ್ಯತೆಯ ವಿಷಯವಾಗಿದ್ದು, ಈ ಸಂಬಂಧ ಸರ್ಕಾರ ನೀತಿಯನ್ನು ರೂಪಿಸಿರುವುದು ಸಮಸ್ಯೆಯ ಗಂಭೀರತೆಯನ್ನು ಪ್ರದರ್ಶಿಸುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ