ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕುಗಳ ಕಾರ್ಯಸ್ಥಗಿತ

ಬೆಂಗಳೂರು,ಡಿ.20: ಬ್ಯಾಂಕ್ ಗ್ರಾಹಕರಿಗೆ ಇದೊಂದು ಶಾಕಿಂಗ್ ನ್ಯೂಸ್!

ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳ ಕಾರ್ಯ ಸ್ಥಗಿತಗೊಳ್ಳಲಿದ್ದು, ಬ್ಯಾಂಕ್ ವಹಿವಾಟಿನಲ್ಲಿ ತೀವ್ರ ವ್ಯತ್ಯಯ ಉಂಟಾಗಲಿದೆ.

ನಾಳೆ ಬ್ಯಾಂಕ್ ಆಫಿಸರ್ಸ್ ಯೂನಿಯನ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಲಿದೆ.ನಾಡಿದ್ದು 4ನೇ ಶನಿವಾರವಾದ್ದರಿಂದ ಬ್ಯಾಂಕ್‍ಗೆ ರಜೆ ಇದೆ.

ಇನ್ನು ಡಿ.23 ಭಾನುವಾರ, ಡಿ.24ರಂದು ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತದೆಯಾದರೂ, ಮರುದಿನ ಡಿ.25 ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮತ್ತೆ ಬ್ಯಾಂಕ್‍ಗಳಿಗೆ ರಜೆಯಿದೆ.

ಡಿ.26ರಂದು ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ ಮುಷ್ಕರಕ್ಕೆ ಕರೆ ನೀಡಿದ್ದು ಅಂದು ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುವುದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ