ಬೆಂಗಳೂರು,ಡಿ.18- ದಿವಂಗತ ಚಲನಚಿತ್ರ ನಟ ಅಂಬರೀಶ್ ಅವರ ಸವಿನೆನಪಿಗಾಗಿ ಅಂಧರ ಕ್ರಿಕೆಟ್ ಲೀಗ್ ಬಿಸಿಎಲ್ಟಿ-10 ಐದನೇ ಆವೃತಿ ಅಂಬಿ ಕಪ್-2018 ಡಿ.20ರಿಂದ ಪ್ರಾರಂಭವಾಗಲಿದೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದ ಡಾ.ಪಿ.ಕೆ.ಪಾಲ್ ಕರ್ನಾಟಕದ ನಾಲ್ಕು ಭಾಗಗಳ 20 ಜಿಲ್ಲೆಗಳಿಂದ 450 ದೃಷ್ಟಿ ವಿಕಲಚೇತನ ಕ್ರಿಕೆಟ್ ಆಟಗಾರರಿಂದ ಹೊನಲು-ಬೆಳಕಿನ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಮತ್ತಿಕೆರೆ ಜೆಪಿಪಾರ್ಕ್ ಸಜ್ಜಾಗಿದೆ.
ಉತ್ತರ ಕರ್ನಾಟಕದ ಗುಲ್ಬರ್ಗ, ಬಿಜಾಪುರ, ಬೆಳಗಾಂ, ರಾಯಚೂರಿನ ನಾಲ್ಕು ತಂಡ, ದಕ್ಷಿಣಕರ್ನಾಟಕದ ಬೆಂಗಳೂರು, ರಾಮನಗರ, ಮೈಸೂರು, ದೊಡ್ಡಬಳ್ಳಾಪುರ ಸೇರಿದಂತೆ 20 ಜಿಲ್ಲೆಗಳಿಂದ ಆಟಗಾರರು ಆಗಮಿಸಲಿದ್ದಾರೆ.
20ರಂದು ಸಂಜೆ 6ರಿಂದ 9ರ ತನಕ ಮಹಿಳೆಯರು ಮತ್ತು ಹಿರಿಯರಿಗೆ ಕ್ರೀಡಾಸ್ಪರ್ಧೆ, 20ರಿಂದ ಹೊನಲು ಬೆಳಕಿನ ಕ್ರೀಡೆ ನಡೆಯಲಿದ್ದು, ಮೇಯರ್ ಗಂಗಾಂಬಿಕೆ, ಪೊಲೀಸ್ ಆಯುಕ್ತರಾದ ಸುನೀಲ್ಕುಮಾರ್ ಉದ್ಘಾಟಿಸಲಿದ್ದಾರೆ.
ಅಂಧರ ಕ್ರಿಕೆಟ್ ನಡೆಸಲು ಕಾರ್ಪೊರೇಟ್ ಕಂಪನಿಗಳು ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.