ಜನಸಾಮಾನ್ಯರಲ್ಲಿ ಜಾಗರತಿ ಮೂಡಿಸಿದರೆ ಸಾಕಷ್ಟುಜೀವಗಳನ್ನು ಉಳಿಸಬಹುದು, ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಕಂಠಸ್ವಾಮಿ

ಬೆಂಗಳೂರು, ಡಿ.18- ಪ್ರತಿ ವರ್ಷ ವಿಶ್ವದಲ್ಲಿ 6 ಕೋಟಿಜನ ಪಾಶ್ರ್ವವಾಯು (ಸ್ಟ್ರೋಕ್) ನಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರಲ್ಲಿಜಾಗೃತಿ ಮೂಡಿಸಿದರೆ ಸಾಕಷ್ಟು ಜೀವಗಳನ್ನು ಉಳಿಸಬಹುದುಎಂದು ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಕಂಠಸ್ವಾಮಿ ತಿಳಿಸಿದರು.

ಇತ್ತೀಚಿನ ದಿನದಲ್ಲಿಏಡ್ಸ್‍ನಿಂದ ಸಂಭವಿಸುವ ಸಾವು ಮೊದಲನೆಯದಾಗಿದೆ.ಸ್ಟ್ರೋಕ್‍ನಿಂದ ಮೃತಪಡುವವರು 2ನೆ ಸ್ಥಾನದಲ್ಲಿದ್ದಾರೆ.ಇದನ್ನು ಹೇಗೆ ತಡೆಗಟ್ಟಬಹುದು ಮತ್ತು ನಿಯಂತ್ರಣ ,ಆರೋಗ್ಯವಂತಜೀವನ ನಡೆಸುವುದು ಹೇಗೆ ಎಂಬ ಬಗ್ಗೆ ಅಪೋಲೋ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಈ ರೋಗದ ಬಗ್ಗೆ ತಡೆಯುವ ಸ್ವಲ್ಪ ಸರಳ ವಿಧಾನವಿದೆ.ಅದೆಂದರೆ ನಗು ಮುಖದಲ್ಲಿ ವ್ಯತ್ಯಾಸ, ಕೈಗಳನ್ನು ಮೇಲೆ ಕೆಳಗೆ ಮಾಡಿದಾಗ ನೋವಿನಿಂದ ಬಳಲುವುದು, ಮಾತನಾಡುವಾಗತೊದಲುವುದು, ಸಮಯ ಹೇಳುವುದಕ್ಕೆ ಚಡಪಡಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದರು.

ಇದೇ ವೇಳೆ ಹಮ್ಮಿಕೊಂಡಿದ್ದಜಾಗೃತಿಅಭಿಯಾನದಲ್ಲಿ ಹಲವಾರುಜನರು ಪಾಲ್ಗೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ