
ಬೆಳಗಾವಿ(ಸುವರ್ಣಸೌಧ), ಡಿ.17- ಬೆಳಗಾವಿ ಭಾಗದ ಭೂತರಾಮನಹಟ್ಟಿಯ ಕಿತ್ತೂರುರಾಣಿ ಚೆನ್ನಮ್ಮ ಕಿರು ಮೃಗಾಲಯವನ್ನು ಉನ್ನತ್ತೀಕರಣಗೊಳಿಸಲು ಟೆಂಡರ್‍ಗಳನ್ನು ಆಹ್ವಾನಿಸಲಾಗಿದ್ದು, ಶೀಘ್ರವೇ ಕೆಲಸ ಆರಂಭಿಸುವುದಾಗಿ ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಉಮೇಶ್‍ಕತ್ತಿ ಪರವಾಗಿ ಪ್ರಶ್ನೆ ಕೇಳಿದ ಅಭಯ್‍ಪಾಟೀಲ್, ಕೇಂದ್ರ ಸರ್ಕಾರದ ಅನುದಾನ ಮತ್ತು ಅನುಮೋದನೆ ಸಿಕ್ಕಿದ್ದರೂ ಮೃಗಾಲಯದ ಉನ್ನತ್ತೀಕರಣ ಕಾಮಗಾರಿ ವಿಳಂಬವಾಗಿತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಮೈಸೂರು ಮೃಗಾಲಯದ ಮಾದರಿಯಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯವನ್ನು ಉನ್ನತ್ತೀಕರಣಗೊಳಿಸಲು ಕೇಂದ್ರ ಸರ್ಕಾರ 2018ರ ಅಕ್ಟೋಬರ್ 9ರಂದು ನಿರ್ದೇಶನ ನೀಡಿದ್ದು, ಅದರ ಪ್ರಕಾರ ಸಿದ್ದಗೊಳಿಸಲಾಗಿರುವ ಮಾಸ್ಟರ್‍ಪ್ಲಾನ್ ಅನುಮೋದನೆಗೊಂಡಿದೆ.ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದರು.