ಬೆಂಗಳೂರು,ಡಿ.17- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಅವುಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಸಿಯಾ ಎಂಎಸ್ಎಂಇಡಿ ಕಾಯ್ದೆ ಕುರಿತಂತೆ ಇದೇ 19ರಂದು ಬೆಳಗ್ಗೆ 10.30ಕ್ಕೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಕಾಸಿಯಾದ ಸದಸ್ಯರಾಗಿರುವ ಉದ್ದಿಮೆದಾರರಿಗೆ ನೆರವಾಗುವುದು ಮತ್ತು ಅವರಿಗೆ ಉಂಟಾಗುತ್ತಿರುವ ಪಾವತಿ ಸಮಸ್ಯೆಗಳನ್ನು ಗಮನಿಸುವ ಬಗ್ಗೆ ತಿಳುವಳಿಕೆ ನೀಡುವುದು ಕಾರ್ಯಾಗಾರದ ಮೂಲ ಉದ್ದೇಶವಾಗಿದೆ.
ಈ ಕಾರ್ಯಾಗಾರವನ್ನು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಲಿದ್ದು, ಎಂಎಸ್ಎಂಇ ಆಯಕ್ತರಾದ ಗುಂಜನ್ ಕೃಷ್ಣ, ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಉಪನಿರ್ದೇಶಕ ಪಿಯೂಶ್ ಅಗರ್ವಾಲ್, ಹೆಚ್ಚುವರಿ ನಿರ್ದೇಶಕ ಎಚ್.ಎಂ.ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ಇದೇ ವೇಳೆ ಸುಪ್ರೀಂಕೋರ್ಟ್, ಮುಂಬೈ ಹಾಗೂ ನಾಗಪುರ ಹೈಕೋರ್ಟ್ನ ವಕೀಲರಾದ ಸುರೇಶ್ ಧೋಲೆ ಅವರು ಕಾಯ್ದೆ ಕುರಿತು ವಿಸ್ತೃತವಾಗಿ ಮಾತನಾಡಲಿದ್ದಾರೆ.