ಶೇ 100ರಷ್ಟು ರಸಾಯನಿಕ ಮುಕ್ತ ಉತ್ಪನ್ನಗಳ ಸೂಪರ್ ಮಾರ್ಕೆಟ್ ಮಳಿಗೆಯನ್ನು ಉದ್ಘಾಟಿಸಿದ ಸಾವಯುವ ಕೃಷಿಕ

ಬೆಂಗಳೂರು, ಡಿ.17- ಆಗ್ರ್ಯಾನಿಕ್ ಮಂಡ್ಯ ತನ್ನ ನೂತನ ಪ್ರಮುಖ ಸೂಪರ್ ಮಾರ್ಕೆಟ್ ಮಳಿಗೆಯನ್ನು ಇಂದಿರಾನಗರದಲ್ಲಿ ತೆರೆಯುತ್ತಿದ್ದು, ಇಲ್ಲಿ ನಿವಾಸಿಗಳ ಶೇ.100ರಷ್ಟು ರಸಾಯನಿಕ ಮುಕ್ತ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ.

ಮಂಡ್ಯದ ಬಳಿಯ ಗ್ರಾಮವೊಂದರ ಸಾವಯವ ಕೃಷಿಕರೊಬ್ಬರು ಈ ಸುಮಾರು 1000 ಚದರ ಅಡಿ ವಿಸ್ತೀರ್ಣದ ಮಳಿಗೆಯನ್ನು(ಇವರಿಂದ ಆಗ್ರ್ಯಾನಿಕ್ ಮಂಡ್ಯ ವೈವಿಧ್ಯಪೂರ್ಣ ಉತ್ಪನ್ನಗಳನ್ನು ಖರೀದಿಸುತ್ತಿದೆ.) ಉದ್ಘಾಟಿಸಿದರು.

ಇದನ್ನು ವೀಕ್ಷಿಸಲು ಮಂಡ್ಯದಿಂದ ಸುಮಾರು 50 ರೈತರು ಬಂದಿದ್ದು, ಅವರು ತಮ್ಮ ಉತ್ಪನ್ನಗಳನ್ನು ಸುಂದರವಾಗಿ ಪ್ಯಾಕ್ ಮಾಡಿ ಜೋಡಿಸಿರುವುದನ್ನು ಕಂಡು ಆನಂದಿಸಿದರು.

ಇದು ನಗರದಲ್ಲಿ ಆಗ್ರ್ಯಾನಿಕ್ ಮಂಡ್ಯದ 5ನೇ ಮಳಿಗೆಯಾಗಿದ್ದು ಎರಡನೇ ಕಂಪನಿ ಮಾಲೀಕತ್ವದ ಮಳಿಗೆಯಾಗಿದೆ.ಇದು ರಾಸಾಯನಿಕಮುಕ್ತ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಪಡೆದು ಗ್ರಾಹಕರಿಗೆ ಸಾದರಪಡಿಸಲಿದೆ.ಈ ಉದ್ದೇಶದಲ್ಲಿ ಭಾಗಿಯಾಗಲು ಮತ್ತು ಎಲ್ಲ ರೈತರು ಮತ್ತು ಗ್ರಾಹಕರಿಗೆ ಸಾವಯವ ಕೃಷಿಯನ್ನು ನಿಜವಾಗಿಸುವ ನಿಟ್ಟಿನಲ್ಲಿ ನೆರವಾಗಲು ಇಚ್ಛಿಸುವ ಜನರಿಗೆ ಫ್ಯಾಂಚೈಸೀಯನ್ನೂ ಕೂಡ ಕಂಪನಿ ನೀಡುತ್ತಿದೆ.

ಆಗ್ರ್ಯಾನಿಕ್ ಮಂಡ್ಯದಲ್ಲಿ ನಾವು ಯಾವಾಗಲೂ ಶೇ. 100ರಷ್ಟು ರಾಸಾಯನಿಕ ಮುಕ್ತ ಆಹಾರವನ್ನು ಪೂರೈಸಲು ಶ್ರಮಿಸುತ್ತೇವೆ. ಜೊತೆಗೆ ನಮ್ಮ ರೈತರಿಗೆ ನ್ಯಾಯಯುತ ಬೆಲೆ ಸುಗುವ ಖಾತ್ರಿ ಮಾಡಿಕೊಳ್ಳುತ್ತೇವೆ ಎಂದು ಆಗ್ರ್ಯಾನಿಕ್ ಮಂಡ್ಯದ ಸ್ಥಾಪಕರಾದ ಮಧುಚಂದ್ರನ್ ಹೇಳಿದರಲ್ಲದೇ ಗ್ರಾಹಕರು ಮತ್ತು ರೈತರನ್ನು ಆರೋಗ್ಯವಂತರನ್ನಾಗಿಸುವ ನಮ್ಮ ಉದ್ದೇಶವನ್ನು ಪೂರ್ಣಗೊಳಿಸಲು, ಮುಂದಿನ ವರ್ಷ ಕನಿಷ್ಠ ಇನ್ನೂ 10 ಹೆಚ್ಚಿನ ಮಳಿಗೆಗಳನ್ನು ಮುಂದಿನ ವರ್ಷ ತೆರೆಯಲು ಇಚ್ಛಿಸಿದ್ದೇವೆ ರೈತರೊಬ್ಬರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ