
ಬೆಳಗಾವಿ: ವಿಧಾನಸಭೆಯಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದ್ದರೂ ಮಾಜಿ ಸಚಿವರೊಬ್ಬರು ಕಲಾಪದ ವೇಳೆ ಮೊಬೈಲ್ ವೀಕ್ಷಣೆ ಮಾಡುವ ಮೂಲಕ ಮತ್ತೆ ಚರ್ಚೆಗೆ ಗ್ರಾಸರಾಗಿದ್ದಾರೆ.
ಭೋಜನ ವಿರಾಮದ ನಂತರ ಕಲಾಪ ಆರಂಭವಾಗುವ ಮೊದಲು ವಿಧಾನಸಭೆಯಲ್ಲಿ ಮಾಜಿ ಸಚಿವ ಎನ್.ಮಹೇಶ್ ಮೊಬೈಲ್ ನಲ್ಲಿ ಮಹಿಳೆಯರ ಚಿತ್ರ ವೀಕ್ಷಣೆ ಮಾಡುತ್ತಿದ್ದರು ಎನ್ನಲಾಗಿದೆ.
ವಿಧಾನಸಭೆಯೊಳಗೆ ಶಾಸಕರು ಮೊಬೈಲ್ ಒಯ್ಯುವುದನ್ನು ನಿಷೇಧಿಸಲಾಗಿದೆ. ಹಾಗಿದ್ದೂ ಮಹೇಶ್ ಮೊಬೈಲ್ ನ್ನು ವಿಧಾನಸಭೆಯೊಳಗೆ ತೆಗೆದುಕೊಂಡು ಹೋಗಿ ನಿಯಮ ಉಲ್ಲಂಘಿಸಿದ್ದಾರೆ. ಆದರೆ ಅವರು ವೀಕ್ಷಿಸುತ್ತಿದ್ದ ಮಹಿಳೆಯರ ಚಿತ್ರ ಯಾವುದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.