
ತುಮಕೂರು, ಡಿ.16- ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದೆ.
ತುರುವೇಕೆರೆ ಮೂಲದ ಲಾವಣ್ಯ (28) ಮೃತಪಟ್ಟ ನವವಿವಾಹಿತೆ.
ಕಳೆದ ಎರಡು ತಿಂಗಳ ಹಿಂದೆ ಗೊಲ್ಲಹಳ್ಳಿಯ ರೇಣುಕಪ್ರಸಾದ್ ಅವರ ಜತೆ ಲಾವಣ್ಯಳನ್ನು ವಿವಾಹ ಮಾಡಿಕೊಡಲಾಗಿತ್ತು.ಇಬ್ಬರುತುಮಕೂರಿನ ಗೊಲ್ಲಹಳ್ಳಿಯಲ್ಲಿ ಜೀವನ ಸಾಗಿಸುತ್ತಿದ್ದರು.
ಆದರೆ, ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಲಾವಣ್ಯ ಶವ ಪತ್ತೆಯಾಗಿದ್ದು, ರೇಣುಕಪ್ರಸಾದ್ ಹಾಗೂ ಅವರಕುಟುಂಬದವರೇ ಲಾವಣ್ಯಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆಎಂದು ಮೃತಳ ಪೊಷಕರು ಪೊಲೀಸರುಗೆದೂರು ನೀಡಿದ್ದಾರೆ.
ಸುದ್ದಿ ತಿಳಿದು ವೃತ್ತ ನಿರೀಕ್ಷಕ ಮಧುಸೂಧನ್ ಹಾಗೂ ಸಬ್ಇನ್ಸ್ಪೆಕ್ಟರ್ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.