ಚಿಂತಾಮಣಿ, ಡಿ.16- ಅಕ್ರಮವಾಗಿ ಶ್ರೀಗಂಧ ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಸುಮಾರು 1ಲಕ್ಷ ರೂ ಬೆಲೆ ಬಾಳುವ 9.ಕೆ.ಜಿ.ಶ್ರೀಗಂಧವನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತರನ್ನುಚಿಂತಾಮಣಿಯ ಕೀರ್ತಿನಗರ ಬಡಾವಣೆ ನಿವಾಸಿ ಅರ್ಬಜ್ಖಾನ್ ಮತ್ತುಕೋಲಾರಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೋಟಗುಡ್ಡಗ್ರಾಮದ ವೆಂಕಟರವಣಪ್ಪ ಮತ್ತುಇದೇ ತಾಲೂಕಿನ ಸುನಕಲ್ಗ್ರಾಮದ ಮುನಿಯಪ್ಪಎಂದು ಗುರುತಿಸಲಾಗಿದೆ.
ಅರಣ್ಯಾಧಿಕಾರಿಗಳಿಗೆ ಸಿಕ್ಕ ಮಾಹಿತಿಯ ಮೇಲೆ ವಲಯ ಅರಣ್ಯಾಧಿಕಾರಿ ಚಿನ್ನಪ್ಪಯ್ಯರವರ ಮಾರ್ಗದರ್ಶನದಲ್ಲಿಉಪವಲಯ ಅರಣ್ಯಾಧಿಕಾರಿಗಳಾದ ಜಯಚಂದ್ರ ಮತ್ತು ಶ್ರೀನಿವಾಸ್, ಸಿಬ್ಬಂದಿಯಾದ ವೆಂಕಟರಮಣ, ಮಣಿ, ಲೋಕೇಶ್, ವಿಶ್ವನಾಥ್ ತಂಡ ಶನಿವಾರ ನಗರದ ಚೇಳೂರು ರಸ್ತೆಯಲ್ಲಿ ಬಸ್ಸಿನಿಂದ ಇಳಿದ ಶ್ರೀನಿವಾಸಪುರ ತಾಲೂಕಿನ ಕೋಟಗುಡ್ಡ ಗ್ರಾಮದ ವೆಂಕಟರವಣಪ್ಪನನ್ನು ವಶಕ್ಕೆ ಪಡೆದುಕೊಂಡು ತಪಾಸಣೆ ನಡೆಸಿದಾಗ ಆತನ ಬಳಿ ಶ್ರೀಗಂಧದ ತುಂಡುಗಳು ಪತ್ತೆಯಾಗಿದೆ.
ನಂತರ ಆತನನ್ನು ವಿಚಾರಣೆ ನಡೆಸಿದಾಗ ನಗರದ ಕೀರ್ತಿನಗರ ಬಡಾವಣೆಯು ನಿವಾಸಿ ಅರ್ಬಜ್ಖಾನ್ ಎಂಬುವರಿಗೆ ಶ್ರೀಗಂಧದ ತುಂಡಗಳನ್ನು ಮಾರಾಟ ಮಾಡುತ್ತಿದ್ದರೆಂದು ಸುಳಿವಿನ ಮೇರೆಗೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಮತ್ತೊಬ್ಬ ಆಸಾಮಿ ಶ್ರೀನಿವಾಸಪುರ ತಾಲೂಕಿನ ಕೋಟಗುಡ್ಡಗ್ರಾಮದ ವೆಂಕಟರವಣಪ್ಪ ಸಿಕ್ಕಿಬಿದಿದ್ದುಇಬ್ಬರಿಂದ ಸುಮಾರು 9.ಕೆ.ಜಿ.ಯಷ್ಟು ಶ್ರೀಗಂಧದ ತುಂಡುಗಳು ಪತ್ತೆಯಾಗಿದೆ.
ಮೂವರನ್ನು ವಶಕ್ಕೆ ಪಡೆದುಕೊಂಡು ನಂತರ ಅರೋಪಿಗಳನ್ನು ಇಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಧೀಶರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಅದೇಶಿಸಿದ್ದಾರೆ.
ನಗರದ ಕೀರ್ತಿನಗರದ ಬಾಡಾವಣೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಅರೋಪಿ ಅರ್ಬಜ್ಖಾನ್ರವರ ತಾಯಿ ಶಬನಾ ಸಹ ಅಕ್ರಮ ಶ್ರೀಗಂಧ ಮಾರಾಟ ಮಾಡುತ್ತಿದ್ದು. ಆಕೆ ಮತ್ತುಅವರಿಗೆ ಶ್ರೀಗಂಧದ ತುಂಡುಗಳನ್ನು ಸರಬರಾಜು ಮಾಡುತ್ತಿದ್ದಆಂಧ್ರಪ್ರದೇಶದ ಗುರ್ರಂಗೊಂಡ ಗ್ರಾಮದ ನಿವಾಸಿ ಆಂಜನಪ್ಪನನ್ನುಇದೇ ಡಿ.3ರಂದು ಅರಣ್ಯಇಲಾಖೆಯವರು ಬಂಧಿಸಿ ಜೈಲಿಗೆ ಕಳುಹಿಸದ ಬೆನ್ನಲ್ಲೆ ಮಗ ಮತ್ತುಆತನತಂದೆ ಸಹ ಅದೇ ವೃತ್ತಿಯಲ್ಲಿತೊಡಗಿದ್ದುಆತನ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.