ಬೆಂಗಳೂರು, ಡಿ.16-ಮೊದಲು ಇಂಗ್ಲಿಷ್ ವ್ಯಾಮೋಹ ಬಿಡಿ, ಕನ್ನಡ ಭಾಷೆ ಬಳಕೆ ಮಾಡಿ ಎಂದು ನಾಡೋಜ ನಿಸಾರ್ ಅಹಮ್ಮದ್ ಕರೆ ನೀಡಿದರು.
ನಯನ ಸಭಾಂಗಣದಲ್ಲಿಂದು ಅಖಿಲ ಕರ್ನಾಟಕ ಕುವೆಂಪು ಸಾಂಸ್ಕøತಿಕ ವೇದಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕನ್ನಡ ನುಡಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಎಲ್ಲೆಲ್ಲೂ ಇಂಗ್ಲಿಷ್ ಬಳಕೆ ಎದ್ದು ಕಾಣುತ್ತಿದೆ. ಕನ್ನಡ ಭಾಷೆಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂಗ್ಲಿಷ್ ಜಾಹೀರಾತುಗಳು ಹೆಚ್ಚು ಕಾಣುತ್ತಿವೆ. ಇದನ್ನು ನೋಡಿದರೆ ನಾವು ನಮ್ಮ ರಾಜ್ಯದಲ್ಲಿದ್ದೇವೋ ಅಥವಾ ಬೇರೆ ಎಲ್ಲಿ ಇದ್ದೆವೋ ಎಂದಿನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಿಗರಿಗೆ ಇಂಗ್ಲಿಷ್ನಲ್ಲಿ ಆಹ್ವಾನ ಕೊಟ್ಟುಕರೆಯುವಷ್ಟು ಅವಮಾನ ಬೇರೊಂದಿಲ್ಲ ಎಂದ ಅವರು, ಕನ್ನಡಪರ ಕೆಲಸ ಮಾಡಲು ಬಂದವರಿಗೆ ತಡೆಗಳೇ ಹೆಚ್ಚು.ಮೊದಲು ಅವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಳವಳಿಗಾರರನ್ನು ಕಂಡರೆ ಮೂಗು ಮುರಿಯುತ್ತಿದ್ದಾರೆ.ಅವರನ್ನು ಟೀಕಿಸುವ ಬದಲು ಅವರಿಗೆ ಪೆÇ್ರೀತ್ಸಾಹಿಸಿ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕನ್ನಡ ಭಾಷೆಗೆ ಅತ್ಯಂತ ಗೌರವವಿದೆ.ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿದರೆ ಅವರು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಮನೋಭಾವ ಪೆÇೀಷಕರಲ್ಲಿ ಮೂಡಿದೆ. ಆದರೆ ನಮ್ಮ ಕನ್ನಡ ಭಾಷೆಯಿಂದ ಉತ್ತಮ ಸಾಧನೆ ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಕುವೆಂಪು, ಮಾಸ್ತಿ ಸೇರಿದಂತೆ ಇತರೆ ಕವಿಗಳು ನಮ್ಮ ನುಡಿಯನ್ನು ವಿಶ್ವಮಟ್ಟಕ್ಕೆ ಸಾರಿದ್ದಾರೆ.ಆದುದರಿಂದ ನಾವೂ ಸಹ ಜನಸಾಮಾನ್ಯರಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸಬೇಕು.ಇಂಗ್ಲೀಷ್ಎಷ್ಟು ಮುಖ್ಯವೋ ಅಷ್ಟೇ ಕನ್ನಡ ಭಾಷೆಯೂ ಮುಖ್ಯವಾಗಿದೆ.ಇಂಗ್ಲೀಷ್ ಭಾಷೆ ವ್ಯವಹಾರಕ್ಕೆ ಮಾತ್ರ ಬಳಸಿ, ಇನ್ನಿತರ ಕಡೆ ಕನ್ನಡ ಭಾಷೆಯನ್ನು ಬಳಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ.ಬಿ.ಎಚ್.ಸತೀಶ್ಗೌಡ ಮಾತನಾಡಿ, ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವುದರ ಮೂಲಕ ಭಾಷೆಯನ್ನು ಅಭಿವೃದ್ಧಿಪಡಿಸಬೇಕು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡದಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ಬರೆದು ಉನ್ನತಾಧಿಕಾರಿಗಳಾಗಿದ್ದಾರೆ. ಕನ್ನಡ ಭಾಷೆಯ ಜ್ಞಾನದಿಂದ ಬೆಳೆಯಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ವಾಕ್ಯದಂತೆ ಕನ್ನಡವನ್ನು ಬಳಸಬೇಕು ಎಂದರು.
ಇದೇ ವೇಳೆ ಸಂಪಾದಕ ಅಂಶಿ ಪ್ರಸನ್ನಕುಮಾರ್, ಶಹಾಪುರ ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ನಾಗರಾಜ್, ಕನ್ನಡ ಪರ ಹೋರಾಟಗಾರ ಎಸ್.ಪ್ರಸನ್ನಕುಮಾರ್ ಶೆಟ್ಟಿ, ಸಾಹಿತಿ ಎಚ್.ಕೆ.ಮಳಲಿಗೌಡ, ಜಾನಪದ ಗಾಯಕ ಜೋಗಿಲ ಸಿದ್ಧರಾಜು, ರಂಗಭೂಮಿ ಕಲಾವಿದ ಎಂ.ಎನ್.ಮಹೇಶ್ಕುಮಾರ್, ಸಮಾಜ ಸೇವಕ ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರರಿಗೆ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.