ಬೆಂಗಳೂರು, ಡಿ.16ನಗರದ ಗಾಂಧಿಭವನದಲ್ಲಿ ಮಹಿಳಾ ಮುನ್ನಡೆ ಮತ್ತು ಲೈಂಗಿಕ ದೌರ್ಜನ್ಯ ವಿರೋಧಿ ಜನ ಚಳವಳಿ ವತಿಯಿಂದ ಆಯೋಜಿಸಿದ್ದ ಮಹಿಳಾ ನ್ಯಾಯಾಲಯ ಸಭೆಯಲ್ಲಿ ಮಾತನಾಡಿದ ಹೋರಾಟಗಾರ್ತಿ ಕವಿತಾ ರತ್ನಂ ಅವರು, ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದು ಕೇವಲ ಶೇ.26ರಷ್ಟು ಮಾತ್ರ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಕುರಿತಂತೆ ದೂರಗಾಮಿಯಾದ ನಡೆ ಸಮಾಜದ ಒಟ್ಟಾರೆ ಸನ್ನಿವೇಶವನ್ನು ಬದಲಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ಮಹಿಳೆಯರ ಕುರಿತಾಗಿ ಹೊಂದಿರುವ ಮನಸ್ಥಿತಿಯನ್ನು ಬದಲಾಯಿಸಬೇಕು. ಮಹಿಳೆಯರ ಕುರಿತು ಸ್ತ್ರೀದ್ವೇಷದ ಹೇಳಿಕೆಗಳನ್ನು ಕೊಡುವ ಅಥವಾ ಅತ್ಯಾಚಾರ ಹಿಂಸೆಯ ಬಗ್ಗೆ ಹಗುರವಾಗಿ ಮಾತನಾಡುವ ರಾಜಕಾರಣಿಗಳು ಅಧಿಕಾರಿಗಳು ಅಥವಾ ಜವಾಬ್ದಾರಿ ಸ್ಥಾನದಲ್ಲಿರುವ ಯಾರಿಗೆ ಆದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತಾಗಬೇಕು ಎಂದರು.
ಜಸ್ಟೀಸ್ ವರ್ಮಾ ಸಮಿತಿ ನೀಡಿರುವ ಎಲ್ಲ ಶಿಫಾರಸುಗಳನ್ನು ಜಾರಿ ಮಾಡಬೇಕು.ಸರ್ಕಾರವು ಮಹಿಳಾ ಪರವಾದ ಸಕಾರಾತ್ಮಕ ಚಿತ್ರಣವಿರುವ ಸಿನಿಮಾ ಜಾಹೀರಾತು ಟಿವಿ ಕಾರ್ಯಕ್ರಮಗಳು ಹೆಚ್ಚು ಮಾಡಲು ಪ್ರಜ್ಞಾ ಪೂರ್ವಕವಾದ ಪ್ರಯತ್ನ ನಡೆಯಬೇಕು.ಇದಕ್ಕಾಗಿ ಬಜೆಟ್‍ನಲ್ಲಿ ಹಣ ಮೀಸಲಿಡಬೇಕು.ಪೆÇೀಕ್ಸೋ ಕಾಯ್ದೆಯ ಸೆಕ್ಷನ್ 3ನ್ನು ತಿದ್ದುಪಡಿ ಮಾಡಿ 10 ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕು ಒತ್ತಾಯಿಸಿದರು.
ಅತ್ಯಾಚಾರದ ಫಲವಾಗಿ ಜನಿಸುವ ಮಕ್ಕಳ ವಿಚಾರದಲ್ಲಿ ಪರಿಪೂರ್ಣ ಕಾನೂನೊಂದು ಜಾರಿಯಾಗಬೇಕು.ನಿರ್ಭಯ ಪ್ರಕರಣಕ್ಕೆ 6 ವರ್ಷ ಬಿಜಾಪುರದ ದಲಿತ ಬಾಲಕಿ ಘಟನೆಗೆ ಒಂದು ವರ್ಷ ಕಳೆದರೂ ಅಸಂಖ್ಯಾತ ಹಿಂಸಾಚಾರದ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹಾಗಾದರೆ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಅತ್ಯಾಚಾರ ತಡೆಯುವುದರಲ್ಲಿ ಕೆಲವೊಂದು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಎನ್‍ಪೆÇೀಲ್ಟ್ ಸಂಸ್ಥೆಯ ಡಾ.ಶೋಯಿಬಾ, ಚಳವಳಿಯ ಗೌರಿ ಮುಂತಾದವರು ಉಪಸ್ಥಿತರಿದ್ದರು.