ಬಡ್ಡಿಗಾಗಿ ಸಾಲ ಕೊಡುವಂತಿಲ್ಲ, ರಾಜ್ಯ ಸರ್ಕಾರದಿಂದ ಹೊಸ ಕಾಯ್ದೆ

ಬೆಳಗಾವಿ : ರೈತರ ಆತ್ಮಹತ್ಯೆ ಕಡಿಮೆ ಮಾಡಲೆಂದು ರಾಜ್ಯ ಸರ್ಕಾರವು ಬಡ್ಡಿ ಸಾಲದ ಮೇಲೆ ನಿಯಂತ್ರಣ ಹೇರಲು ಮಂಡಿಸಿದ್ದ ಮಸೂದೆಗೆ ಇಂದು ಸದನದಲ್ಲಿ ಅನುಮೋದನೆ ದೊರೆತಿದೆ.

ಹೊಸ ಕಾಯ್ದೆಯಂತೆ ರೈತರಿಗೆ ಸಾಲ ನೀಡಿ ಬಡ್ಡಿಗೆ ಪೀಡಿಸುವಂತಿಲ್ಲ. ಕೈಸಾಲಕ್ಕೆಂದು ಅಡವಿಟ್ಟುಕೊಂಡ ವಸ್ತುಗಳನ್ನು ಹರಾಜು ಮಾಡುವುದು, ಸ್ವಂತಕ್ಕೆ ಬಳಸಿಕೊಳ್ಳುವುದು ಇತರೆ ಕಾರ್ಯಗಳನ್ನು ಮಾಡುವುದನ್ನು ಈ ಕಾಯ್ದೆಯು ನಿಷೇಧಿಸುತ್ತದೆ.

ಕೈ ಸಾಲಗಳಿಂದಾಗಿಯೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರವು ಗಮನಿಸಿತ್ತು, ಕೈ ಸಾಲಕ್ಕೆ ಅಧಿಕ ಬಡ್ಡಿಗಳನ್ನು ಹೇರಲಾಗುತ್ತಿತ್ತು. ಚಕ್ರಬಡ್ಡಿಗಳು ಹೇರಲಾಗುತ್ತಿತ್ತು. ಒತ್ತೆ ಇಟ್ಟುಕೊಂಡು ಸಾಲ ನೀಡುವುದು, ಸಾಲಗಾರನ ವಸ್ತುಗಳನ್ನು ಹರಾಜು ಹಾಕುವುದು ಇನ್ನೂ ಹಲವು ಮಾದರಿಗಳಲ್ಲಿ ಸಾಲಪಡೆದವರನ್ನು ದೌರ್ಜನ್ಯಕ್ಕೆ ಈಡು ಮಾಡಲಾಗುತ್ತಿತ್ತು. ಇದು ಇನ್ನು ಮುಂದೆ ನಿಲ್ಲಲಿದೆ.

ಈಗಾಗಲೇ ಬಡ್ಡಿ ಪಾವತಿ ಮಾಡಲಾಗದೆ ನ್ಯಾಯಾಲಯಕ್ಕೆ ಹೋಗಿರುವ ಎಲ್ಲಾ ಹರಾಜುಗಳು ರದ್ದಾಗಲಿವೆ. ಭೂಮಿ ಅಡವಿಟ್ಟುಕೊಂಡು ಸಾಲ ನೀಡಿದ್ದಲ್ಲಿ, ಜಮೀನನ್ನು ಮಾರುವಂತೆ ಅಥವಾ ಹರಾಜು ಮಾಡುವಂತಿಲ್ಲ ಅದು ರೈತನಿಗೇ ಸೇರುತ್ತದೆ.ಸಾಲ ಪಡೆದ ವ್ಯಕ್ತಿಯನ್ನು ಬಡ್ಡಿಗಾಗಿ ಪೀಡಿಸಿದರೆ 3 ವರ್ಷ ಜೈಲು ಶಿಕ್ಷೆ, ಮತ್ತು 30 ಸಾವಿರ ದಂಡ ವಿಧಿಸಲಾಗುತ್ತದೆ. ರೈತರನ್ನು ಆತ್ಮಹತ್ಯೆಯಿಂದ ಪಾರುಪಾಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ