
ಬೆಂಗಳೂರು,ಡಿ.15-ಶ್ರೀ ಪಾತಾಳೇಶ್ವ ರ ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ ನಾಳೆ ಸಂಜೆ 5ರಿಂದ 9 ಗಂಟೆವರೆಗೆ ಗೀತಗಾಯನ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ಭುವನೇಶ್ವರಿನಗರ ಕೆ.ಪಿ.ಅಗ್ರಹಾರದ ಮರಿಯಪ್ಪ ಭಾವಿ ಸರ್ಕಲ್ ಬಳಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಮಟ್ಟದ ಗಾಯಕರಿಂದ ಗೀತಗಾಯನ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಗೌರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಆಹ್ವಾನಿತರಾಗಿ ಶಾಸಕ ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ರಂಗಭೂಮಿ ಕಲಾವಿದ ಮರಿಯಪ್ಪ, ಸಮಾಜ ಸೇವಕರಾದ ಸುರೇಶ್, ಮರಿಸ್ವಾಮಿ, ಎಂ.ಮಹದೇವ, ಚಲುವರಾಜು, ಬಸವರಾಜು, ಪ್ರಕಾಶ್, ಅರ್ಚಕ ಚಂದ್ರಮೋಹನ ಸ್ವಾಮೀಜಿ, ಭಜನಾಕಾರ ನಿಂಗಯ್ಯ, ಕನಕ ದೇವಾಲಯದ ಸೇವಾಕರ್ತ ವಾಟಾಳ್ ಜವರಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕನಕ ದೇವಾಲಯದ ಪ್ರಧಾನ ಕಾರ್ಯದರ್ಶಿ ಪುಟ್ಟಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಿಬಿಎಂಪಿ ಡಾ.ರಾಜು ಅಧ್ಯಕ್ಷತೆ ವಹಿಸಲಿದ್ದಾರೆ.