ಮನೆಗೆ ನುಗ್ಗಿ ಚಾಕು ತೋರಿಸಿ ವ್ಯಕ್ತಿಯಿಂದ ಚಿನ್ನ ದೋಚಿ ಪರಾರಿಯಾದ ಕಳ್ಳರು

ಬೆಂಗಳೂರು,ಡಿ.15- ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿದ ಚೋರರು ಟಿವಿ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ 47 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೃಷ್ಣಯ್ಯ ರಸ್ತೆಯ ಬಿಟಿಎಸ್ ಲೇಔಟ್‍ನ ನಾಗರಾಜು ಎಂಬುವರು ರಾತ್ರಿ 8.30ರಲ್ಲಿ ಟಿವಿ ವೀಕ್ಷಿಸುತ್ತಿದ್ದರು.ಮನೆಯಲ್ಲಿ ಇವರೊಬ್ಬರೇ ಇರುವುದನ್ನು ಅರಿತ ಕಳ್ಳರು ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿ ಇವರನ್ನು ಬೆದರಿಸಿ ಆಭರಣ ಕದ್ದೊಯ್ದಿದ್ದಾರೆ.

ಈ ಬಗ್ಗೆ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ