ಮತ್ತೇ ಸಚಿವ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಎನ್.ಮಹೇಶ್

ಬೆಂಗಳೂರು,ಡಿ.14- ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮನ್ನು ಮತ್ತೆ ಪರಿಗಣಿಸಿದರೆ ಸಂಪುಟ ಸೇರುವ ಇಂಗಿತವನ್ನು ಮಾಜಿ ಸಚಿವ ಎನ್.ಮಹೇಶ್ ವ್ಯಕ್ತಪಡಿಸಿದರು.

ಬಹುಜನ ಸಮಾಜ ಪಕ್ಷದ ಆದೇಶದಂತೆ ಸಂಪುಟ ತೊರೆದಿದ್ದ ಎನ್.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿತ್ತು.ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಕಡೆಯಿಂದ ಸಂಪುಟಕ್ಕೆ ಸೇರ್ಪಡೆಯಾಗಿದ್ದೆ.ನಮ್ಮ ಪಕ್ಷದ ಕಾರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ಮತ್ತೆ ಸಂಪುಟ ಸೇರ್ಪಡೆಗೆ ನಮ್ಮ ಪಕ್ಷದ ಮುಖಂಡರಾದ ಮಾಯಾವತಿ ಹಸಿರು ನಿಶಾನೆ ತೋರಿದರೆ ಅವರ ಆದೇಶ ಪಾಲನೆ ಮಾಡುತ್ತೇವೆ.

ನಾವು ಸಂಪುಟ ಸೇರಲು ಜೆಡಿಎಸ್‍ನವರ ತಕರಾರು ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ನಮ್ಮ ಪಕ್ಷದ ವರಿಷ್ಠರಾದ ಮಾಯಾವತಿಯವರ ನಿರ್ಧಾರದಂತೆ ರಾಜೀನಾಮೆ ನೀಡಿದ್ದೆ.ಮತ್ತೆ ಅವರು ಇಷ್ಟ ಪಟ್ಟರೆ ಸಂಪುಟ ಸೇರ್ಪಡೆಯಾಗುವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ