ಛತ್ತೀಸ್​ಗಢ ಮುಖ್ಯಮಂತ್ರಿ ಗಾದಿ ಏರಲಿದ್ದಾರೆ ಭೂಪೇಶ್​ ಬಾಗೆಲ್​?

ರಾಯ್ಪುರಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಸಾಧಿಸಿದ ಅಭೂತಪೂರ್ವ ಗೆಲುವಿನ ಸಂಪೂರ್ಣ ಹೆಗ್ಗಳಿಕೆ ಭೂಪೇಶ್​ ಬಾಗೆಲ್​ ಅವರಿಗೆ ಸಲ್ಲಬೇಕು. ಹೀಗಾಗಿ ಛತ್ತೀಸ್​ಗಢದ ಮುಖ್ಯಮಂತ್ರಿ ಸ್ಥಾನವನ್ನು ಅವರೇ ಅಲಂಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ನ್ಯೂಸ್​ 18ಗೆ ತಿಳಿಸಿವೆ.

ಇಂದು ಮಧ್ಯಾಹ್ನ ಪಕ್ಷದ ಶಾಸಕಾಂಗ ಸಭೆ ನಡೆದ ನಂತರ ರಾಹುಲ್​ ಗಾಂಧಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಶುಕ್ರವಾರ ಕೂಡ ರಾಹುಲ್ ಗಾಂಧಿ ಅವರು ಬಾಗೆಲ್​ ಮತ್ತು ಟಿ.ಎಸ್​. ಸಿಂಗ್ ದೇವ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಂತೆ ಛತ್ತೀಸ್​ಗಢ ಕೂಡ ಹಲವು ಸಮಸ್ಯೆಗಳನ್ನು ಒಳಗೊಂಡಿದೆ.

ಛತ್ತೀಸ್​ಗಢದ ಚುನಾವಣೆ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪಿ.ಎಲ್.ಪುನಿಯಾ ಅವರು ಇಂದು ನಡೆಯುವ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಾಗೆಲ ಮತ್ತು ದೇವ್ ಅವರ ಅದೃಷ್ಟ ಹೇಗಿದೆ ಎಂಬುದನ್ನು ನೋಡಬೇಕಿದೆ.

ಕಳೆದ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ತಿರಸ್ಕರಿಸಿ, ಕಾಂಗ್ರೆಸ್​ ಕೈ ಹಿಡಿದಿದ್ದಾರೆ. 90 ವಿಧಾನಸಭಾ ಸದಸ್ಯ ಬಲ ಛತ್ತೀಸ್​ಗಢ ವಿಧಾನಸಭಾಯಲ್ಲಿ ಕಾಂಗ್ರೆಸ್​ ಬರೋಬ್ಬರಿ 68 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಾಗೆಲಾ ಪಕ್ಷದ ರಾಜ್ಯಾಧ್ಯಕ್ಷರಾಗಿ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಬಾಗೇಲ ಅವರು ರಾಜ್ಯದಲ್ಲಿ ಪ್ರಬಲವಾಗಿರುವ ಕುರ್ಮಿ ಸಮುದಾಯದಿಂದ ಬಂದವರು. ಅಜಿತ್​ ಜೋಗಿ ಕಾಂಗ್ರೆಸ್​ ತೊರೆದ ನಂತರ ಅವರೊಂದಿಗೆ ಕೆಲ ದಲಿತ ಮತಗಳು ಶೇ.8ರಿಂದ 10 ರಷ್ಟು ಅವರೊಂದಿಗೆ ಹೋದವು. ಅಲ್ಲದೇ, ಚುನಾವಣೆ ವೇಳೆ ಜೋಗಿ ಅವರು ಬಿಜೆಪಿ ಪಕ್ಷದೊಂದಿಗೆ ಮೃದು ಧೋರಣೆ ಹೊಂದಿದ್ದರು, ಹೀಗಾಗಿ, ಜೋಗಿ ಅವರ ಪಕ್ಷ ಬಿಜೆಪಿಯ ಬಿ ಟೀಮ್​ ಎಂದು ಕಾಂಗ್ರೆಸ್​ ದೂರಿತ್ತು. ಈ ಎಲ್ಲದರ ನಡುವೆಯೂ ಬಾಗೇಲ ಅವರು ರಾಜ್ಯದಲ್ಲಿ ಪಕ್ಷವನ್ನು ಭರ್ಜರಿಯಾಗಿ ಗೆಲ್ಲಿಸಿಕೊಂಡಿರುವುದು ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದುಬರಲು ಸಹಕಾರಿಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ