ರಾಯ್ಪುರ: ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವಿನ ಸಂಪೂರ್ಣ ಹೆಗ್ಗಳಿಕೆ ಭೂಪೇಶ್ ಬಾಗೆಲ್ ಅವರಿಗೆ ಸಲ್ಲಬೇಕು. ಹೀಗಾಗಿ ಛತ್ತೀಸ್ಗಢದ ಮುಖ್ಯಮಂತ್ರಿ ಸ್ಥಾನವನ್ನು ಅವರೇ ಅಲಂಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ನ್ಯೂಸ್ 18ಗೆ ತಿಳಿಸಿವೆ.
ಇಂದು ಮಧ್ಯಾಹ್ನ ಪಕ್ಷದ ಶಾಸಕಾಂಗ ಸಭೆ ನಡೆದ ನಂತರ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಶುಕ್ರವಾರ ಕೂಡ ರಾಹುಲ್ ಗಾಂಧಿ ಅವರು ಬಾಗೆಲ್ ಮತ್ತು ಟಿ.ಎಸ್. ಸಿಂಗ್ ದೇವ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಂತೆ ಛತ್ತೀಸ್ಗಢ ಕೂಡ ಹಲವು ಸಮಸ್ಯೆಗಳನ್ನು ಒಳಗೊಂಡಿದೆ.
ಛತ್ತೀಸ್ಗಢದ ಚುನಾವಣೆ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪಿ.ಎಲ್.ಪುನಿಯಾ ಅವರು ಇಂದು ನಡೆಯುವ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಾಗೆಲ ಮತ್ತು ದೇವ್ ಅವರ ಅದೃಷ್ಟ ಹೇಗಿದೆ ಎಂಬುದನ್ನು ನೋಡಬೇಕಿದೆ.
ಕಳೆದ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ತಿರಸ್ಕರಿಸಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. 90 ವಿಧಾನಸಭಾ ಸದಸ್ಯ ಬಲ ಛತ್ತೀಸ್ಗಢ ವಿಧಾನಸಭಾಯಲ್ಲಿ ಕಾಂಗ್ರೆಸ್ ಬರೋಬ್ಬರಿ 68 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಾಗೆಲಾ ಪಕ್ಷದ ರಾಜ್ಯಾಧ್ಯಕ್ಷರಾಗಿ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಬಾಗೇಲ ಅವರು ರಾಜ್ಯದಲ್ಲಿ ಪ್ರಬಲವಾಗಿರುವ ಕುರ್ಮಿ ಸಮುದಾಯದಿಂದ ಬಂದವರು. ಅಜಿತ್ ಜೋಗಿ ಕಾಂಗ್ರೆಸ್ ತೊರೆದ ನಂತರ ಅವರೊಂದಿಗೆ ಕೆಲ ದಲಿತ ಮತಗಳು ಶೇ.8ರಿಂದ 10 ರಷ್ಟು ಅವರೊಂದಿಗೆ ಹೋದವು. ಅಲ್ಲದೇ, ಚುನಾವಣೆ ವೇಳೆ ಜೋಗಿ ಅವರು ಬಿಜೆಪಿ ಪಕ್ಷದೊಂದಿಗೆ ಮೃದು ಧೋರಣೆ ಹೊಂದಿದ್ದರು, ಹೀಗಾಗಿ, ಜೋಗಿ ಅವರ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ದೂರಿತ್ತು. ಈ ಎಲ್ಲದರ ನಡುವೆಯೂ ಬಾಗೇಲ ಅವರು ರಾಜ್ಯದಲ್ಲಿ ಪಕ್ಷವನ್ನು ಭರ್ಜರಿಯಾಗಿ ಗೆಲ್ಲಿಸಿಕೊಂಡಿರುವುದು ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದುಬರಲು ಸಹಕಾರಿಯಾಗಿದೆ.