ಬೆಂಗಳೂರು, ಡಿ.14-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿರುವ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಕಾರ್ಮಲ್ ರಾಮ್ ಮತ್ತು ಬೈಯ್ಯಪ್ಪನಹಳ್ಳಿ ಎ ಪ್ಯಾನೆಲ್ ಮಧ್ಯೆ ಬೆಳ್ಳಂದೂರು ಬಳಿ ಇಂದು ಮುಂಜಾನೆ 30 ವರ್ಷದ ಯುವಕ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಈತನ ಹೆಸರು, ವಿಳಾಸ ತಿಳಿದುಬಂದಿಲ್ಲ.
ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿಡಲಾಗಿದೆ.
ಮತ್ತೊಂದು ಪ್ರಕರಣ ಇಳಲಗಿ ಮತ್ತು ಆನೇಕಲ್ ರೈಲ್ವೆ ನಿಲ್ದಾಣದ ಮಧ್ಯೆ ನಡೆದಿದೆ. ಮುಂಜಾನೆ ಸುಮಾರು 45 ವರ್ಷದ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಈತನ ಹೆಸರು, ವಿಳಾಸ ತಿಳಿದುಬಂದಿಲ್ಲ.
ಎರಡೂ ಪ್ರಕರಣಗಳನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.