ಯಾವುದೇ ಕೆಶಿಫ್ ನ ಕಚೇರಿಯನ್ನು ಹಾಸನಕ್ಕೆ ಶಿಪ್ಟ್ ಮಾಡಿಲ್ಲ, ಸಚಿವ ಎಚ್.ಡಿ.ರೇವಣ್ಣ

ಬೆಳಗಾವಿ, ಡಿ.14- ಬೆಳಗಾವಿಯಿಂದ ಹಾಸನಕ್ಕೆ ಕೆಶಿಫ್‍ನ್ನು ಶಿಫ್ಟ್ ಮಾಡೋ ವಿಚಾರ, ಸ್ಪೆಷಲ್ ಸಬ್ ಡಿವಿಷನ್‍ನ್ನು ಇಲ್ಲಿಂದ ತೆಗೆಯಲಾಗಿದೆ.ಸಬ್ ಡಿವಿಷನ್ ಮಾತ್ರ ಬೆಳಗಾವಿಯಲ್ಲೇ ಇದೆ.ಇಲ್ಲಿ ಆಕ್ಷೇಪ ವ್ಯಕ್ತಪಡಿಸಿದರಿಂದ ಸಬ್ ಡಿವಿಷನ್ ಇಲ್ಲೆ ಇದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಇಂದು ಬೆಳ್ಳಿಗೆ ಪೆÇಲೀಸ್ ಪರೇಡ್ ಮೈದಾನದಲ್ಲಿ ಕೆಶಿಪ್ ವತಿಯಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಂದ ಕೆಶಿಫ್ ನ ಯಾವುದೇ ಕಚೇರಿಯನ್ನು ಹಾಸನಕ್ಕೆ ಶಿಫ್ಟ್ ಮಾಡಿಲ್ಲ ಎಂದು ಹೇಳಿದರು.

ಸಭಾಪತಿ ಸ್ಥಾನ ತಪ್ಪಿದ್ದಕ್ಕೆ ಬಸವರಾಜ್ ಹೊರಟ್ಟಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆಸಿ ರೇವಣ್ಣ, ಕಾಂಗ್ರೆಸ್ ನವರು ಎಸ್.ಆರ್.ಪಾಟೀಲ್ ಸಭಾಪತಿ ಆಗಬೇಕು ಅಂತಾ ಹೇಳಿದ್ದರು. ಇದಕ್ಕೆ ದೇವೇಗೌಡರು ಪಾಟೀಲ್ ಉತ್ತರ ಕರ್ನಾಟಕದವರು ಎಂದು ಅದಕ್ಕೆ ಒಪ್ಪಿಗೆ ಕೊಟ್ಟಿದ್ದರಾದರೂ ಕೊನೆ ಕ್ಷಣದಲ್ಲಿ ಪ್ರತಾಪ್‍ಚಂದ್ರ ಶೆಟ್ಟಿಗೆ ಕೊಟ್ಟಿದ್ದಾರೆ ಎಂದರು.

ಸಭಾಪತಿ ಆಯ್ಕೆ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಹೆಬ್ಬೆಟ್ ಸಿಎಂ ಎಂಬ ಬಸವರಾಜ್ ಹೊರಟ್ಟಿ ಹೇಳಿಕೆಗೆ ನಾನೇನು ರಿಯಾಕ್ಟ್ ಮಾಡಲ್ಲ ಎಂದು ರೇವಣ್ಣ ಹೇಳಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ