ಏಕಗವಾಕ್ಷಿ ನಿಯಮದಡಿ ನೇಮಕಾತಿ, ಹಾಲಿಯಿರುವ ನಿಯಮಗಳ ತಿದ್ದುಪಡಿ ಮಾಡಬೇಕು, ಡಿಸಿಎಂ

ಬೆಳಗಾವಿ,ಡಿ.14- ಡಿಎಆರ್, ಕೆಎಸ್‍ಆರ್‍ಪಿ, ಕೆಎಸ್‍ಐಎಫ್, ಎಫ್‍ಪಿಪಿ ಮತ್ತು ವೈರ್‍ಲೆಸ್ ಹುದ್ದೆಗಳನ್ನು ಏಕಗವಾಕ್ಷಿ ಪದ್ದತಿಯಡಿ ನೇಮಕಾತಿ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಿದೆ ಎಂದು ಡಿಸಿಎಂ ಪರಮೇಶ್ವರ್ ವಿಧಾನಪರಿಷತ್‍ಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಆರ್.ಧರ್ಮಸೇನ ಅಸವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹುದ್ದೆಗಳನ್ನು ಏಕಗವಾಕ್ಷಿ ನಿಯಮದಡಿ ನೇಮಕಾತಿ ಮಾಡಬೇಕಾದರೆ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಬೇಕು.

ಇಲಾಖೆ ಅಧಿಕಾರಿಗಳ ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾಗರಿಕ ಸಿಎಆರ್, ಡಿಎಆರ್, ಕೆಎಸ್‍ಆರ್‍ಪಿ, ಕೆಎಸ್‍ಐಎಸ್‍ಎಫ್, ಎಫ್‍ಬಿಪಿಬಿ ಹುದ್ದೆಗಳಿಗೆ ನೇಮಕ ಮಾಡುವಾಗ ಇವರೆಲ್ಲರಿಗೂ ಬೇರೆ ಬೇರೆ ರೀತಿಯ ತರಬೇತಿಗಳನ್ನು ನೀಡಲಾಗಿರುತ್ತದೆ. ಸಿಎಆರ್ ಮತ್ತು ಡಿಎಆರ್‍ಗೆ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಿದರೆ ಕೆಎಸ್‍ಆರ್‍ಪಿ ಮತ್ತು ಕೆಎಸ್‍ಐಎಫ್‍ಎಸ್ ಸಿಬ್ಬಂದಿಗೆ ಇಲಾಖೆ ಹಂತದಲ್ಲಿ ಲಿಖಿತ ಪರೀಕ್ಷೆ ಮಾಡಲಾಗುವುದು.ಅಂತರ್ ಇಲಾಖೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಏಕಗವಾಕ್ಷಿ ಪದ್ಧತಿ ಜಾರಿ ಮಾಡುವ ಸಂಬಂಧ ಕೇರಳ ಸರ್ಕಾರದಲ್ಲಿ ಥಾಮಸ್ ವರದಿಯನ್ನು ಅನುಷ್ಠಾನ ಮಾಡಲಾಗಿದೆ.ಆದರೆ ಇದನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಂಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ