ಬೆಂಗಳೂರು,ಡಿ.14-ನಗರ ಯೋಜನೆ ಸ್ಥಾಯಿ ಸಮಿತಿಯನ್ನುಳಿದು ಬಿಬಿಎಂಪಿ 11 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇಯರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು. ನಗರ ಯೋಜನೆ ಸ್ಥಾಯಿ ಸಮಿತಿಗೆ ತೀವ್ರ ಪೈಪೆÇೀಟಿ ಏರ್ಪಟ್ಟಿದ್ದು, ಸದರಿ ಸಮಿತಿಯ ಅಧ್ಯಕ್ಷರ ಆಯ್ಕೆಯನ್ನು ಮುಂದೂಡಲಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 11 ಸ್ಥಾಯಿ ಸಮಿತಿಗಳಿಗೆ 130 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ನಗರ ಯೋಜನೆ ಸ್ಥಾಯಿ ಸಮಿತಿಗೆ 9 ಸದಸ್ಯರು ಮಾತ್ರ ಆಯ್ಕೆಯಾಗಿದ್ದರು.ಸಮಿತಿಯಲ್ಲಿರುವ ಸದಸ್ಯರು ಇಂದು ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಗೊಳಿಸಿದರು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಹೇಮಲತಾ ಗೋಪಾಲಯ್ಯ, ಬೃಹತ್ ಸಾರ್ವಜನಿಕ ಕಾಮಗಾರಿಗೆ ಲಾವಣ್ಯ ಗಣೇಶ್, ಅಪೀಲು ಸ್ಥಾಯಿ ಸಮಿತಿಗೆ ಸುಜಾತಾ ರಮೇಶ್, ಸಾಮಾಜಿಕ ನ್ಯಾಯ ಸಮಿತಿಗೆ ಸೌಮ್ಯಾ ಶಿವಕುಮಾರ್, ಲೆಕ್ಕ ಪತ್ರ ಸಮಿತಿಗೆ ವೇಲು ನಾಯ್ಕರ್, ಆರೋಗ್ಯ ಸ್ಥಾಯಿ ಸಮಿತಿಗೆ ಮುಜಾಹಿದ್ ಪಾಷಾ, ಆಡಳಿತ ಮತ್ತು ಸುಧಾರಣೆಗೆ ಆನಂದ್, ತೋಟಗಾರಿಕೆಗೆ ಐಶ್ವರ್ಯ, ವಾರ್ಡ್ ಮಟ್ಟದ ಕಾಮಗಾರಿಗೆ ಉಮ್ಮೇ ಸಲ್ಮಾ, ಶಿಕ್ಷಣ ಸಮಿತಿಗೆ ಇಮ್ರಾನ್ ಪಾಷಾ ಹಾಗೂ ಮಾರುಕಟ್ಟೆ ಸಮಿತಿಗೆ ಫರೀದಾ ಇಶ್ತಿಯಾಕ್ ಅಧ್ಯಕ್ಷರಾಗಿ ಆಯ್ಕೆಯಾದರು.