ತೀವ್ರಗೊಂಡ ಕಬ್ಬು ಬೆಳೆಗಾರರು ಮತ್ತು ರೈತರ ಪ್ರತಿಭಟನೆ

ಬೆಳಗಾವಿ(ಸುವರ್ಣ ಸೌಧ)ಡಿ.13- ಬೆಳಗಾವಿಯಲ್ಲಿ ಕಬ್ಬಿನ ಜ್ವಾಲೆ ಮುಗಿಲು ಮುಟ್ಟಿದೆ. ದರ ನಿಗದಿ, ಬಾಕಿ ಪಾವತಿಗಾಗಿ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು , ಬಂಡಾಯವೆದ್ದಿರುವ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದೆ.

ಕಬ್ಬು ಬೆಳೆ ಬೆಲೆ ನಿಗದಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ಕಬ್ಬು ಬೆಳೆಗಾರರು ಇಂದು ಅಕ್ಷರಶಃ ಆಕ್ರೋಶಗೊಂಡಿದ್ದರು.ದರ ನಿಗದಿ ಕಬ್ಬು ಬೆಳೆ ಪಾವತಿಸುವ ಸಂಬಂಧ ಸರ್ಕಾರ ಸಂಜೆಯೊಳಗೆ ನಿರ್ಧಾರ ಪ್ರಕಟಿಸಬೇಕೆಂದು ಗಡುವು ನೀಡಿದ್ದಾರೆ.
ಸಾವಿರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೆರವಣಿಗೆ ಹೊರಟು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೆÇಲೀಸರು ಅರ್ಧ ದಾರಿಯಲ್ಲೇ ತಡೆದರು.

ಬಾಗಲಕೋಟೆ, ಬಿಜಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಚನ್ನಪ್ಪ ಪೂಜಾರಿ, ಸಿದ್ದಪ್ಪ ಮೋದವಿ, ಜಯಶ್ರೀ ಗುರಣ್ಣನವರ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಬಾರಿ ನಾವು ಪ್ರತಿಭಟನೆ ನಡೆಸುತ್ತಿದ್ದಾಗ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಭರವಸೆ ಈಡೇರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಬೇಡಿಕೆಗಳ ಬಗ್ಗೆ ಗಮನಹರಿಸಿಲ್ಲ.

ಸಕ್ಕರೆ ಕಂಪನಿ ಮಾಲೀಕರು 15 ದಿನಗಳ ಒಳಗಾಗಿ ಕಬ್ಬು ಬೆಳೆಗಾರರಿಗೆ ಕಬ್ಬಿನ ಬೆಲೆ ಪಾವತಿಸಬೇಕು.ಆದರೆ ವರ್ಷ ಕಳೆದರೂ ನಮಗೆ ಹಣ ನೀಡಿಲ್ಲ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.ನಮ್ಮ ಸಮಸ್ಯೆ ಕೇಳುವವರ್ಯಾರು ಎಂದು ಅಳಲು ತೋಡಿಕೊಂಡರು.

ಮೊದಲೇ ಪ್ರತಿಭಟನೆಯ ಸುಳಿವನ್ನರಿತ್ತಿದ್ದ ಪೆÇಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿ ಬಿಗಿ ಭದ್ರತೆ ಕೈಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಇನ್ನೂ ಹಲವಾರ ಸಂಘಟನೆಗಳು ಸುವರ್ಣ ಸೌಧದ ಎದುರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ