ನವದೆಹಲಿ: ನೀವೇನಾದರೂ ವಿದೇಶಕ್ಕೆ ಪ್ರಯಾಣ ಬೆಳೆಸಲು ಆಲೋಚಿಸುತ್ತಿದ್ದರೆ, ಇಂಡಿಗೋ ಏರ್ಲೈನ್ಸ್ ವಿಶೇಷ ಆಫರ್ ಘೋಷಣೆ ಮಾಡಿದೆ. ಅತಿ ಕಡಿಮೆ ಟಿಕೆಟ್ ದರದಲ್ಲಿ ವಿದೇಶ ಅತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಿದೆ.
ಈ ಆಫರ್ ಅನುಸಾರ ಕೇವಲ 3299 ರೂ.ಗಳಲ್ಲಿ ಅಂತಾರಾಷ್ಟ್ರೀಯ ಫ್ಲೈಟ್ ಟಿಕೆಟ್ ಬುಕ್ ಮಾಡಬಹುದು. 2018ರಲ್ಲಿ ಇಂಡಿಗೋ ನೀಡಿರುವ ಎಲ್ಲಾ ಆಫರ್ ಗಳಿಗೆ ಹೋಲಿಸಿದರೆ ಇದು ಬೆಸ್ಟ್ ಆಫರ್ ಆಗಿದೆ ಎನ್ನಲಾಗಿದೆ. ಈ ಕೊಡುಗೆಯ ಪ್ರಯೋಜನ ಪಡೆಯಲು ಇಚ್ಚಿಸುವವರು ಡಿಸೆಂಬರ್ 27, 2018 ರಿಂದ ಏಪ್ರಿಲ್ 15, 2019 ರವರೆಗಿನ ಪ್ರಯಾಣಕ್ಕಾಗಿ ಡಿಸೆಂಬರ್ 12 ರಿಂದ 16ರ ಒಳಗೆ ಟಿಕೆಟ್ ಬುಕ್ ಮಾಡಬಹುದು.
ದೇಶದ ಅತಿ ದೊಡ್ಡ ಏರ್ಲೈನ್ಸ್ ಇಂಡಿಗೋ ಅಕ್ಟೋಬರ್ ತಿಂಗಳಿನಲ್ಲಿ ಕೇವಲ 2 ದಿನಗಳಿಗೆ 899 ರೂ.ಗಳಿಗೆ ದೇಶಿಯ ಪ್ರಯಾಣ ಮಾಡುವ ಕೊಡುಗೆ ನೀಡಿತ್ತು.