ಬೆಳಗಾವಿ,ಡಿ.13-ರಾಜ್ಯಾದ್ಯಂತ ಮಂಜೂರು ಮಾಡಿರುವ ಬಯಲು ರಂಗಮಂದಿರಗಳು ಕಾರ್ಯ ನಿರ್ವಹಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವೆ ಡಾ.ಜಯಮಾಲ ವಿಧಾನಪರಿಷತ್ನಲ್ಲಿಂದು ತಿಳಿಸಿದರು.
ಸದಸ್ಯ ಕೆ.ಸಿ.ಕೊಂಡಯ್ಯ ಅವರ ಪರವಾಗಿ ಶರಣಪ್ಪ ಮತ್ತೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರ, ಕೆಲವು ಕಡೆ ಬಯಲು ರಂಗಮಂದಿರಗಳು ಕಾರ್ಯ ನಿರ್ವಹಿಸಲು ಕಾನೂನಿನ ತೊಡಕ್ಕಾಗಿದೆ. ಎಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಅಂಥ ಕಡೆ ಕಾರ್ಯಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು.ಸಣ್ಣಪುಟ್ಟ ತೊಡಕುಗಳಿದ್ದರೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಕೆಲವರು ಕೆಲವು ಕಡೆ ಸಿದ್ದಗೊಂಡಿರುವ ರಂಗಮಂದಿರಗಳನ್ನು ಪ್ರಾರಂಭಿಸಲು ದಾಖಲೆಗಳನ್ನು ನೀಡಿದ್ದಾರೆ. ಅಂತಹ ಕಡೆ ಪ್ರಾರಂಭಿಸಲು ಇಲಾಖೆ ವತಿಯಿಂದ ಸೂಚಿಸಲಾಗಿದೆ. ಶೀಘ್ರದಲ್ಲೇ ಈ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.