ಸಂಸತ್ ನಲ್ಲಿ ಅಂಬರೀಶ್ ಅವರಿಗೆ ಸಂತಾಪ ಸೂಚಿಸದೆ ಅವಮಾನ, ದೇವೇಗೌಡರು ಅಸಮಾಧಾನ

ನವದೆಹಲಿ, ಡಿ.12 – ಖ್ಯಾತ ಚಿತ್ರನಟ, ಮಾಜಿ ಸಚಿವ ಮತ್ತು ಮಾಜಿ ಸಂಸದ ಡಾ.ಅಂಬರೀಶ್ ಅವರಿಗೆ ಇಂದೂ ಕೂಡ ಸಂತಾಪ ಸೂಚಿಸುವಲ್ಲಿ ಲೋಕಸಭೆ ವಿಫಲವಾಗಿದೆ.

ನಿನ್ನೆಯಿಂದ ಆರಂಭಗೊಂಡ ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ನಿನ್ನೆ ಅಗಲಿದ ಗಣ್ಯರಿಗೆ ಲೋಕಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಆದರೆ ಅಂಬರೀಶ್ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರ ಗಮನಕ್ಕೆ ನಿನ್ನೆಯೇ ತಂದಿದ್ದರು.

ಸದನದಲ್ಲಿ ಮಾಜಿ ಸಂಸದರಿಗೆ ಸಂತಾಪ ಸೂಚಿಸುವ ಪಟ್ಟಿಯಲ್ಲಿ ನಾಳೆ ಅಂಬರೀಶ್ ಹೆಸರು ಸೇರಿಸುವುದಾಗಿ ಗೌಡರಿಗೆ ಸ್ಪೀಕರ್ ಭರವಸೆ ನೀಡಿದ್ದರು.
ಆದರೆ ಇಂದು ಎನ್.ಡಿ. ತಿವಾರಿ, ಮದನ್‍ಲಾಲ್ ಖುರಾನಾ, ಸಿ.ಕೆ.ಜಾಫರ್ ಷರೀಫ್, ಗುರುದಾಸ್ ಕಾಮತ್ ಸೇರಿದಂತೆ 11 ಮಾಜಿ ಸಂಸದರಿಗೆ ಸಂತಾಪ ಸಲ್ಲಿಸಲಾಯಿತು. ಆದರೆ ಇಂದೂ ಕೂಡ ಈ ಪಟ್ಟಿಯಲ್ಲಿ ಅಂಬರೀಶ್ ಹೆಸರು ಬಿಟ್ಟು ಹೋಯಿತು. ಸದನದಲ್ಲಿ ಅಂಬರೀಶ್ ಅವರಿಗೆ ಸಂತಾಪ ಸೂಚಿಸದ ಕಾರಣ ದೇವೇಗೌಡರು ಅಸಮಾಧಾನಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ