ಹೈದರಾಬಾದ್ : 2019 ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂತಲೇ ಬಿಂಬಿಸಲಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತೆ ಅಧಿಕಾರಕ್ಕೆ ಬರುವತ್ತಾ ದಾಪುಗಾಲಿಟ್ಟಿದೆ.
ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳ ಪೈಕಿ ಟಿಆರ್ ಎಸ್ 77, ಕಾಂಗ್ರೆಸ್ 21, ಬಿಜೆಪಿ 2 ಮತ್ತು ಇತರರು ನಾಲ್ಕು ಕೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಧಕಾರಕ್ಕೆ ಏರಲು 60 ಸ್ಥಾನಗಳ ಅಗತ್ಯವಿದೆ.
ಪ್ರತ್ಯೇಕ ರಾಜ್ಯವಾದ ಬಳಿಕ 2ನೇ ಚುನಾವಣೆ ಕಾಣುತ್ತಿರುವ ತೆಲಂಗಾಣದಲ್ಲಿ ಈ ಬಾರಿಯೂ ಟಿಆರ್ಎಸ್ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಮತದಾನೋತ್ತರ ಸಮೀಕ್ಷಾ ವರದಿಗಳು ಭವಿಷ್ಯ ನುಡಿದಿವೆ.