ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಮುನ್ನಡೆ

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 94 , ಬಿಜೆಪಿ 65, ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಆದಾಗ್ಯೂ, ರಾಜಸ್ಥಾನದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಮಾಡಿದ ಹರಸಾಹಸ ಯಶಸ್ವಿಯಾಗುತ್ತಾ ಅಥವಾ ಮತದಾರರು ಬದಲಾವಣೆ ಬಯಸಿ ‘ಕೈ’ ಹಿಡಿಯಲಿದ್ದಾರೆ ಎಂಬುದು ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಜಲ್ರಪಠಾಣ್​ ಕ್ಷೇತ್ರದಲ್ಲಿ ಸಿಎಂ ವಸುಂಧರಾ ರಾಜೇಗೆ 2000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂತೆಯೇ ಮಾಜಿ ವಿದೇಶಾಂಗ ಸಚಿವ ಜಸ್ವಂತ್​ ಸಿಂಗ್​ ಪುತ್ರ ಮನ್ವೇಂದ್ರ ಸಿಂಗ್​ಗೆ ಹಿನ್ನಡೆಯಾಗಿದೆ.

ಮಾಜಿ ಸಿಎಂ ಅಜೀತ್ ಜೋಗಿ (ಮರವಾಹಿ ಕ್ಷೇತ್ರ) ಮುನ್ನಡೆ. ಅಶೋಕ್ ಗೆಹ್ಲೋಟ್, ವಸುಂಧರಾ ರಾಜೆ ಹಾಗೂ ಸಚಿನ್ ಪೈಲಟ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸಚಿನ್ ಪೈಲಟ್ ನಿವಾಸದ ಎದುರು ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ